ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಹದೇಶ್ವರ ಸರ್ವರ ಸ್ವತ್ತು: ಮೋಕ್ಷಪತಿ ಶ್ರೀ

Vishwanath S
Updated On : 17 May 2013, 11:05 am

ಕ.ಪ್ರ.ವಾರ್ತೆ ,  ಮೈಸೂರು ,  ಮೇ 17
ಪವಾಡ ಪುರುಷ ಮಲೇ ಮಹದೇಶ್ವರರು ಸರ್ವರ ಸ್ವತ್ತು ಎಂದು ಪಿರಿಯಾಪಟ್ಟಣದ ರಾವಂದೂರಿನ ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ ಹೇಳಿದರು. ವಿ.ವಿ. ಕ್ರಿಯೇಷನ್ಸ್ ಸಂಸ್ಥೆಯು ನಂಜುಮಳಿಗೆಯ ನಾದ ಬ್ರಹ್ಮ ಸಂಗೀತ ಸಭಾದಲ್ಲಿ ಶುಕ್ರವಾರ ಏರ್ಪಡಿಸಿದ್ದ ಭಕ್ತರ ಭಕ್ತ ಮಹದೇವ ಭಕ್ತಿಗೀತೆಗಳ ಧ್ವನಿ ಸುರುಳಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂತರ ಹಾಗೂ ಮಹನೀಯರ ಬದುಕು ಮುಳ್ಳಿನ ಹಾಸಿಗೆ. ಮಹದೇಶ್ವರರಾಗಲಿ, ಎಡೆಯೂರು ಸಿದ್ದೇಶ್ವರರಾಗಲಿ, ಮುಪ್ಪಿನ ಷಡಕ್ಷರಿಯಾಗಲಿ, ಅಂಬೇಡ್ಕರ್ ಅವರಾಗಲಿ ಇಂತಹ ಅನೇಕ ಮಹನೀಯರು ನಡೆದು ಬಂದ ಹಾದಿ ಕಠೋರವಾದುದು. ಅವರ ಆಚಾರ ವಿಚಾರಗಳನ್ನು ಎಲ್ಲರೂ ಅನುಸರಿಸಲು ಸಾಧ್ಯವಾಗುವುದಿಲ್ಲ. ಮಹದೇಶ್ವರರ ಸಾಹಿತ್ಯ ಸಮುದ್ರ ಇದ್ದಂತೆ, ಅದನ್ನು ಎಲ್ಲರೂ ಬಳಸಿಕೊಂಡಿದ್ದಾರೆ. ಹೀಗಾಗಿ ಅವರು ಸರ್ವರ ಸ್ವತ್ತು ಎಂದರು.
ಇಂದು ಓದುವ ಸಂಸ್ಕೃತಿ ಕಡಿಮೆಯಾಗುತ್ತಿದ್ದು, ನೋಡುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಭಕ್ತಿ ಗೀತೆಗಳ ಧ್ವನಿ ಸುರಳಿಯನ್ನು ಹೊರತಂದಿರುವುದು ಶ್ಲಾಘನೀಯ. ಯುವಜನತೆ ಇಂತಹ ಭಕ್ತಿಗೀತೆಗಳತ್ತ ಒಲವು ಹೆಚ್ಚಿಸಿಕೊಂಡು ಜೀವನ ಸುಧಾರಣೆ ಮಾಡಿಕೊಳ್ಳಬೇಕು ಎಂದ ಅವರು, ಬಸವಣ್ಣ ಹಾಗೂ ದಾಸಶ್ರೇಷ್ಠರ ಧ್ವನಿ ಸುರಳಿಗಳು ಹೊರ ಬರಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಧ್ವನಿ ಸುರಳಿ ಲೋಕಾರ್ಪಣೆಗೊಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್. ಅಣ್ಣೇಗೌಡ, ನಗರ ಪಾಲಿಕೆ ಸದಸ್ಯ ಬಿ.ಎಲ್. ಭೈರಪ್ಪ, ಕಿರುತೆರೆ ಕಲಾವಿದ ಶಿವಾಜಿರಾವ್ ಜಾದವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement