ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಟಿ. ನರಸೀಪುರ: ತಾಲೂಕಿನ ತಲಕಾಡು ಗ್ರಾಮದಲ್ಲಿನ ಗುಬ್ಬಿ ತೋಟದಪ್ಪ ವೀರಶೈವ ವಿದ್ಯಾರ್ಥಿ ನಿಲಯಕ್ಕೆ 2013-14ನೇ ಸಾಲಿನ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 7ನೇ ತರಗತಿಯಿಂದ 10ನೇ ತರಗತಿಯವರೆಗೆ ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತದೆ. ವೀರಶೈವ ಸಮುದಾಯದಲ್ಲಿ ಬಡತನದಲ್ಲಿರುವ ಅರ್ಹ ವಿದ್ಯಾರ್ಥಿಗಳು ಜೂ.15 ರೊಳಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಹೆಚ್ಚಿನ ಮಾಹಿತಿಗೆ ತಲಕಾಡು ಗ್ರಾಮದ ಅಸ್ತಿಕೇರಿ ಮಠ ಅಥವಾ ಮೊ. 9448950418 ಅಥವಾ 9141730268ಗೆ ಸಂಪರ್ಕಿಸಬಹುದು.