ಅಮಾನತು ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ , ಮೈಸೂರು , ಮೇ 24
ನಜರ್ಬಾದ್ ಠಾಣೆ ಇನ್ಸ್ಪೆಕ್ಟರ್ ಜಿ.ಎನ್. ಮೋಹನ್ ಅವರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ಕಾವಲುಪಡೆ ಕಾರ್ಯಕರ್ತರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಗುರುವಾರ ಪ್ರತಿಭಟಿಸಿದರು. ರಾಜಕೀಯ ಪ್ರಭಾವಕ್ಕೊಳಗಾಗಿ ಮೋಹನ್ ಅವರನ್ನು ಅಮಾನತುಗೊಳಿಸಲಾಗಿದೆ ಹೊರತು, ಕರ್ತವ್ಯಲೋಪದಿಂದ ಅಲ್ಲ. ಮೇಲಧಿಕಾರಿಗಳ ಸೂಚನೆಯಂತೆ ಪ್ರಕರಣ ದಾಖಲಿಸಿದ್ದು ನಿರ್ಲಕ್ಷ್ಯವೇ ಎಂದು ಪ್ರಶ್ನಿಸಿದ ಅವರು, ರಾಜಕೀಯ ಒತ್ತಡಕ್ಕೆ ಮಣಿಯುವುದು ಬೇಡ ಎಂದು ಆಗ್ರಹಿಸಿದರು.
ಇನ್ಸ್ಪೆಕ್ಟರ್ ಮೋಹನ್ ತಪ್ಪು ಮಾಡಿದ್ದರೆ ಪ್ರಕರಣ ದಾಖಲಾದ ದಿನವೇ ಅಮಾನತುಗೊಳಿಸಬೇಕಿತ್ತು. ಅದರ ಬದಲು 20 ದಿನಗಳ ನಂತರ ಅಮಾನತುಗೊಳಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮೋಹನ್ ಅವರ ಅಮಾನತು ಆದೇಶ ಹಿಂಪಡಯಬೇಕು. ಇಲ್ಲದಿದ್ದರೆ ವಿವಿಧ ರೀತಿಯಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕಾವಲುಪಡೆ ರಾಜ್ಯಾಧ್ಯಕ್ಷ ಎಂ. ಮೋಹನ್ಕುಮಾರ್ ಗೌಡ, ಮುಖಂಡರಾದ ಎಚ್.ಎಚ್. ಕುಮಾರ್, ಎಂ. ಕೃಷ , , ರಾಚಪ್ಪ, ಎಸ್. ಶ್ರೀಕಾಂತ್, ಪ್ರವೀಣ, ಕಾರ್ತಿಕ್, ರಮೇಶ್, ಎಸ್. ಚಂದ್ರಶೇಖರ, ಎಂ. ಸ್ವಾಮಿ, ಎಂ. ಮಹದೇವಸ್ವಾಮಿ ಮೊದಲಾದವರು ಇದ್ದರು.