ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಿಲ್ಲಾ ಬ್ರೆಂಚ್ ಪ್ರೆಸ್ ಕ್ರೀಡಾ ಕಾರ್ಯಕ್ರಮ

Vishwanath S
Updated On : 24 May 2013, 11:01 am

ಮೈಸೂರು: ಇಲ್ಲಿನ ವಿದ್ಯಾರಣ್ಯಪುರಂನ ಕರ್ನಾಟಕ ದೀನ ದಲಿತರ ಕ್ರೀಡಾ ಸಂಘದ ವತಿಯಿಂದ ಮೇ 26ರ ಬೆಳಗ್ಗೆ 8ಕ್ಕೆ ರಾಮಮಂದಿರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 122ನೇ ಜನ್ಮದಿನಾಚರಣೆ ಅಂಗವಾಗಿ 3ನೇ ವರ್ಷದ ವಾರ್ಷಿಕೋತ್ಸವ, ಮೈಸೂರು ಜಿಲ್ಲಾ ಬೆಂಚ್‌ಪ್ರೆಸ್ ಕ್ರೀಡಾ ಕಾರ್ಯಕ್ರಮ ನಡೆಯಲಿದೆ. ಶಾಸಕ ಎಂ.ಕೆ. ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಎ. ರಾಮದಾಸ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್, ಮಾಜಿ ಮೇಯರ್ ಪುರುಷೋತ್ತಮ್, ಕೆ.ಆರ್. ಬ್ಯಾಂಕ್ ಅಧ್ಯಕ್ಷ ಎಚ್. ವಾಸು, ಮಾಜಿ ಉಪಮೇಯರ್ ಬಿ. ಸಿದ್ದರಾಜು ಭಾಗವಹಿಸುವರು.

29ಕ್ಕೆ ಸಂಗೀತ ಕಾರ್ಯಕ್ರಮ
ಮೈಸೂರು:
ಪಿ.ಬಿ. ಶ್ರೀನಿವಾಸ್, ಡಾ. ರಾಜ್‌ಕುಮಾರ್, ಎಸ್. ಜಾನಕಿ ಮುಂತಾದ ಹಿರಿಯ ಗಾಯಕರಿಗೆ ನಮನ ಸಲ್ಲಿಸಲು ಅಲೆ ಅಲೆಗಳು ಇಂಪು, ಸಂಗೀತದ ಕಂಪು ಎಂಬ ಸಂಗೀತ ಕಾರ್ಯಕ್ರಮವನ್ನು ಮೇ 29ರ ಸಂಜೆ 5.30ಕ್ಕೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದೆ. ಹಿರಿಯ ಗಾಯಕರಿಗೆ ನಮನ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜ್ಯೋತಿ ಭಜನಾ ಮಂಡಳಿ ಅಧ್ಯಕ್ಷ ಕೆ.ಪಿ. ವಸಂತ ಆಚಾರ್ಯ ಜ್ಯೋತಿ ಬೆಳಗಿಸಲಿದ್ದು, ಅಮೋಘ್ ವಾಹಿನಿ ಮುಖ್ಯಸ್ಥ ಬಿಳಿಗಿರಿ ರಂಗನಾಥ್, ದೂರದರ್ಶನ ಸಹಾಯಕ ನಿರ್ದೇಶಕ ಸಿ.ಎನ್. ರಾಮಚಂದ್ರ, ಸಂಗೀತ ನಿರ್ದೇಶಕ ವಿ. ಮನೋಹರ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕಾರ್ಯಕ್ರಮ ಆಯೋಜಕಿ ಮತ್ತು ಗಾಯಕಿ ಸುನೀತಾ ಆಚಾರ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತಮ್ಮೊಡನೆ ಮಾಸ್ಟರ್ ಹಿತೈಷಿ ಧ್ವನಿಗೂಡಿಸಲಿದ್ದಾರೆ ಎಂದು ಹೇಳಿದರು.

ಇಂದು ಬುದ್ಧ ಪೂರ್ಣಿಮಾ
ಮೈಸೂರು:
ಮಾನವ ಮಂಟಪ ವತಿಯಿಂದ ಮೇ 25ರಂದು ಬೆಳಗ್ಗೆ 10ಕ್ಕೆ ಕೃಷ್ಣಮೂರ್ತಿಪುರಂನ ಅಶೋಕ ವೃತ್ತದ ಬಳಿ ಇರುವ ಬುದ್ಧ ವಿಹಾರ ಕೇಂದ್ರದಲ್ಲಿ ಬುದ್ಧ ಪೂರ್ಣಿಮಾ ಹಾಗೂ ಸರಳ ಸಾಮೂಹಿಕ ವಿವಾಹ ಏರ್ಪಡಿಸಿದೆ. ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಸಮಾಜವಾದಿ ಪ. ಮಲ್ಲೇಶ್, ಮೀರಾ ನಾಯಕ್, ಪತ್ರಿಕೋದ್ಯಮಿ ರಾಜಶೇಖರ ಕೋಟಿ ಭಾಗವಹಿಸುವರು.

ವಿಶೇಷ ಉಪನ್ಯಾಸ  
ಮೈಸೂರು:
ಮಾನಸ ಗಂಗೋತ್ರಿ ಡಾ.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಮೇ 25ರಂದು ಬೆಳಗ್ಗೆ 11ಕ್ಕೆ ಬಸವಣ್ಣ- ಅಂಬೇಡ್ಕರ್ ಸಾಂಸ್ಕೃತಿಕ ಅನುಸಂಧಾನ ಕುರಿತು ಡಾ. ಬಸವರಾಜ ಕಲ್ಗುಡಿ ಅವರಿಂದ ಉಪನ್ಯಾಸ ಏರ್ಪಡಿಸಿದೆ. ಪ್ರೊ. ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸುವರು.

ಬುದ್ಧಿಮಾಂದ್ಯ ಯುವತಿ ನಾಪತ್ತೆ
ಮೈಸೂರು: 
ಬುದ್ಧಿಮಾಂದ್ಯ ಯುವತಿಯೊಬ್ಬಳು ಕಾಣೆಯಾದ ಘಟನೆ ಟಿ. ನರಸೀಪುರ ತಾಲೂಕು ನಂಜಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪುಟ್ಟಮಾದಶೆಟ್ಟಿ ಎಂಬವರ ಪುತ್ರಿ ಪವಿ ಉ. ಪವಿತ್ರಾ (18) ಕಾಣೆಯಾದ ಯುವತಿ. ಈಕೆಯ ಎಡ ಕೈನಲ್ಲಿ ಚಂದ್ರ ಎಂಬ ಹಚ್ಚೆ ಇದೆ. ಈ ಸಂಬಂಧ ಟಿ. ನರಸೀಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಈಕೆಯ ಬಗ್ಗೆ ಮಾಹಿತಿ ಇರುವವರು ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.

ಮಂಜುನಾಥ್ ನೇಮಕ
ಮೈಸೂರು:
ನಗರ ಕಾಂಗ್ರೆಸ್ ಸಮಿತಿಗೆ ಹೆಚ್ಚುವರಿ ಕಾರ್ಯದರ್ಶಿಯಾಗಿ ವಿ. ಮಂಜುನಾಥ್ ಅವರನ್ನು ರಾಜ್ಯಾಧ್ಯಕ್ಷರಾದ ಡಾ. ಜಿ. ಪರಮೇಶ್ವರ್ ಅವರ ಸಲಹೆ ಮೇರೆಗೆ ನೇಮಿಸಲಾಗಿದೆ ಎಂದು ನಗರಾಧ್ಯಕ್ಷ ಸಿ. ದಾಸೇಗೌಡ ತಿಳಿಸಿದ್ದಾರೆ.

ವೃದ್ಧಾಶ್ರಮ ಪ್ರವೇಶಕ್ಕೆ ಅರ್ಜಿ
ಮೈಸೂರು:
ನಟರಾಜ ಪ್ರತಿಷ್ಠಾನದ ಅಂಗ ಸಂಸ್ಥೆಯಾಗಿರುವ ನಟರಾಜ ವೃದ್ಧಾ ಸೇವಾಶ್ರಮ ಮತ್ತು ವಿಶ್ವಧಾಮ ವೃದ್ಧಾಶ್ರಮಗಳ ಸಂಯುಕ್ತಾಶ್ರಯದಲ್ಲಿ ನಡೆಸಲಾಗುತ್ತಿರುವ ವೃದ್ಧಾಶ್ರಮದ ಪ್ರವೇಶಕ್ಕೆ ಅರ್ಜಿ ಕರೆಯಲಾಗಿದೆ. ಆಶ್ರಮಕ್ಕೆ ಪ್ರವೇಶ ಪಡೆಯಲು 60 ವರ್ಷ ತುಂಬಿರಬೇಕು, ನಿರಾಶ್ರಿತರಾಗಿರಬೇಕು, ಯಾವುದೇ ಸೋಂಕು ರೋಗ ಇರಬಾರದು. ಆಸಕ್ತರು ಜೂ. 10 ರೊಳಗೆ ಖಿಲ್ಲೆ ಮೊಹಲ್ಲಾದ ನಟರಾಜ ಕಲ್ಯಾಣ ಮಂದಿರದ ಕಚೇರಿಯಿಂದ ಅರ್ಜಿ ಪಡೆದು, ಕಾರ್ಯದರ್ಶಿ ನಟರಾಜ ಪ್ರತಿಷ್ಠಾನ, ಶಂಕರಮಠದ ರಸ್ತೆ, ಮೈಸೂರು ಇವರಿಗೆ ಸಲ್ಲಿಸುವುದು. ಮಾಹಿತಿಗೆ ದೂ. 2445454 ಸಂಪರ್ಕಿಸುವಂತೆ ಪ್ರತಿಷ್ಠಾನದ ಕಾರ್ಯದರ್ಶಿ ತಿಳಿಸಿದ್ದಾರೆ.

ಶ್ರೀನಿವಾಸಪ್ರಸಾದ್‌ಗೆ ಅಭಿನಂದನೆ
ಮೈಸೂರು:
ಕಾಂಗ್ರೆಸ್ ಸರ್ಕಾರದಲ್ಲಿ ಕಂದಾಯ ಸಚಿವರಾಗಿರುವ ವಿ. ಶ್ರೀನಿವಾಸಪ್ರಸಾದ್ ಅವರನ್ನು ಅಶೋಕ ಸ್ಪೋಟ್ಸ್ ಕ್ಲಬ್ ಪದಾಧಿಕಾರಿಗಳು ಅಭಿನಂದಿಸಿದ್ದಾರೆ. ಸಂಸ್ಥೆಯ ಹಾಲಿ ಅಧ್ಯಕ್ಷರೂ ಹಾಗೂ ಕ್ಲಬ್‌ನ ಹಳೆಯ ಫುಟ್‌ಬಾಲ್ ಆಟಗಾರರು ಆದ ಶ್ರೀನಿವಾಸಪ್ರಸಾದ್ ಅವರು 5 ವರ್ಷ ಸಂಪೂರ್ಣ ಅಧಿಕಾರ ನಡೆಸಿ ನಾಡಿನ ಜನತೆಗೆ ಒಳ್ಳೆಯ ಕಾರ್ಯ ಮಾಡಿ ಜನಮನ್ನಣೆ ಗಳಿಸಲಿ ಎಂದು ಕ್ಲಬ್ ಖಜಾಂಚಿ ಪಿ. ಚಂದ್ರಶೇಖರ್ ಆಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement