ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈ ರಿಯಾಲಿಟಿ ಪ್ರದರ್ಶನ

Vishwanath S
Updated On : 24 May 2013, 11:49 am

ಕ.ಪ್ರ.ವಾರ್ತೆ  ,   ಮೈಸೂರು  ,   ಮೇ 24
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಕ್ರೆಡಾಯ್ ಸಂಸ್ಥೆ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಮೈ ರಿಯಾಲ್ಟಿ- 2013 ಕಟ್ಟಡ ಸಾಮಗ್ರಿಗಳ ಪ್ರದರ್ಶನ ಶುಕ್ರವಾರ ಆರಂಭವಾಯಿತು.
ಪ್ರದರ್ಶನ ಉದ್ಘಾಟಿಸಿದ ಚಾಮರಾಜ ಕ್ಷೇತ್ರದ ಶಾಸಕ ವಾಸು ಮಾತನಾಡಿ, ನಿವೇಶನ ಖರೀದಿಸುವ ಗ್ರಾಹಕರಿಗೆ ಬಿಎಐ ಹಾಗೂ ಕ್ರೆಡಾಯ್‌ನಂತಹ ಸಂಸ್ಥೆಗಳು ಗುಣಮಟ್ಟದ ಕಟ್ಟಡ ಒದಗಿಸಬೇಕು. ಶ್ರೇಷ್ಠ ಗುಣಮಟ್ಟದ, ದೀರ್ಘ ಕಾಲ ಬಾಳಿಕೆ ಬರುವ ಮೌಲ್ಯಯುತ ಕಟ್ಟಡ ನಿರ್ಮಿಸಿದಾಗ ಗ್ರಾಹಕರು ನಂಬಿಕೆ ಇಟ್ಟು ಖರೀದಿಸುತ್ತಾರೆ. ಕಟ್ಟಡ ಖದೀರಿಸುವ ಗ್ರಾಹಕರಿಗೆ ಹೆಚ್ಚಿನ ತಿಳಿವಳಿಕೆ ಇಲ್ಲದಿದ್ದಲ್ಲಿ ಪ್ರದರ್ಶನಕ್ಕೆ ಆಗಮಿಸಿ ಅಗತ್ಯ ಮಾಹಿತಿ ಪಡೆಯಬಹುದು. ಈ ಒಂದು ಮಹತ್ವದ ಕಾರ್ಯಕ್ಕೆ ಮುಂದಾಗಿರುವ ಬಿಎಐ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.
ಸಿಆರ್‌ಇಡಿಐನ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಘಟಕದ ಗೌರವ ಕಾರ್ಯದರ್ಶಿ ಕೆ. ಅಜಿತ್ ನಾರಾಯಣ, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಪಿ. ವಿಶ್ವನಾಥ್, ಗೌರವ ಕಾರ್ಯದರ್ಶಿ ಎಸ್. ಮಹಾದೇವಸ್ವಾಮಿ, ಮೈ ರಿಯಾಲ್ಟಿ ಶೋ ಮುಖ್ಯಸ್ಥ ಎಸ್.ಆರ್. ಸ್ವಾಮಿ, ಕಾರ್ಯದರ್ಶಿ ವೈ.ಜಿ. ಚಿನ್ನಸ್ವಾಮಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement