ಪರೀಕ್ಷಾ ಶುಲ್ಕ ಪಾವತಿಸಲು ಸೂಚನೆ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಜುಲೈನಲ್ಲಿ ಎಂ.ಎಸ್ಸಿ ಪ್ರಥಮ ಮತ್ತು ಮೂರನೆಯ ಸೆಮಿಸ್ಟರ್ ಪದವಿಯ ಪರೀಕ್ಷೆಗಳಿಗೆ ಜೂ.10 ರೊಳಗೆ ಶುಲ್ಕವನ್ನು ಹಾಗೂ 200 ದಂಡ ಶುಲ್ಕದೊಂದಿಗೆ ಜೂ.20 ರೊಳಗೆ ಪಾವತಿಸಲು ಸೂಚಿಸಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಸಲು ಅರ್ಜಿ/ ಸುತ್ತೋಲೆಯನ್ನು ಅಂಚೆಯ ಮೂಲಕ ಈಗಾಗಲೇ ರವಾನಿಸಲಾಗಿದೆ. ಒಂದು ವೇಳೆ ಪರೀಕ್ಷಾ ಅರ್ಜಿ/ ಸುತ್ತೋಲೆ ತಲುಪದೇ ಇರುವ ವಿದ್ಯಾರ್ಥಿಗಳು ತಮ್ಮ ಹತ್ತಿರದ ಪ್ರಾದೇಶಿಕ ಕೇಂದ್ರ/ ಅಧ್ಯಯನ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಪಡೆದು ಪರೀಕ್ಷಾಂಗ ವಿಭಾಗದ ಕುಲಸಚಿವರು, ರಾಜ್ಯ ಮುಕ್ತ ವಿವಿ, ಮುಕ್ತಗಂಗೋತ್ರಿ, ಮೈಸೂರು- 06 ವಿಳಾಸಕ್ಕೆ ಕಳುಹಿಸಲು ತಿಳಿಸಲಾಗಿದೆ. ಪರೀಕ್ಷೆಗಳು ಜುಲೈ 2ನೇ ವಾರದಲ್ಲಿ ಆರಂಭವಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ ದೂ. 0821-2519942, 2419956, 2515169 ಸಂಪರ್ಕಿಸಬಹುದು. http//karnatakastateopenuniversity.in ವೆಬ್ಸೈಟ್ನಲ್ಲಿ ಅರ್ಜಿ ಪಡೆಯಬಹುದು ಎಂದು ಕುಲಸಚಿವರು ತಿಳಿಸಿದ್ದಾರೆ.