ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಹಿಳೆ ಕೊಲೆ: ಅಪ್ಪ, ಮಗನ ಬಂಧನ

Rashmi Kasaragodu
Updated On : 28 May 2013, 12:12 pm

ಕ.ಪ್ರ.ವಾರ್ತೆ   ಮೈಸೂರು   ಮೇ 27
ಅನೈತಿಕ ಸಂಬಂಧ ಪ್ರಕರಣದ ಸಂಬಂಧ ಮಹಿಳೆಯನ್ನು ಕೊಲೆ ಮಾಡಿದ ಅಪ್ಪ ಮತ್ತು ಇದಕ್ಕೆ ಸಹಕರಿಸಿದ ಮಗನನ್ನು ಮೈಸೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿ, ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೈಸೂರು ತಾಲೂಕು ಮೆಲ್ಲಹಳ್ಳಿ ನಿವಾಸಿ ಮಲ್ಲಪ್ಪ (55) ಮತ್ತು ಆತನ ಪುತ್ರ ವೆಂಕಟೇಶಪ್ರಸಾದ್ (20) ಬಂಧಿತ ಆರೋಪಿಗಳು. ಈ ಪ್ರಕರಣದ ಮತ್ತೊಬ್ಬ ಆರೋಪಿ ಲೋಕೇಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಪ್ರಕರಣದ ವಿವರ: ಮೆಲ್ಲಹಳ್ಳಿ ನಿವಾಸಿ ಲೇ. ಸಾಕಯ್ಯ ಎಂಬವರ ಪತ್ನಿ ಗೀತಾ (26) ಕೊಲೆಯಾದವರು. ಗೀತಾಳ ಪತಿ ಸಾಕಯ್ಯ 8 ತಿಂಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ನಡುವೆ ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ಗೀತಾ ಕೆಲಸ ಮಾಡಿಕೊಂಡಿದ್ದರು.
ಸಾಕಯ್ಯ ಅವರ ಅಣ್ಣನಾದ ಮಲ್ಲಪ್ಪ ಎಂಬವರ ಪುತ್ರ ವೆಂಕಟೇಶಪ್ರಸಾದ್ ಮತ್ತು ಗೀತಾ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು.
ಚಿಕ್ಕಮ್ಮನ ಜತೆಗೆ ಮಗ ಸಂಬಂಧ ಇರಿಸಿಕೊಂಡಿರುವ ಬಗ್ಗೆ ಮಲ್ಲಪ್ಪ ಜಗಳ ತೆಗೆದಿದ್ದು, ಹಲವು ಬಾರಿ ಗಲಾಟೆ ಮಾಡಿದ್ದ.
ಇದೇ ವಿಚಾರದಲ್ಲಿ ಮೇ 18 ರಂದು ಜಗಳ ನಡೆದಿದ್ದು, ಮಲ್ಲಪ್ಪ ಕೋಪದಲ್ಲಿ ಗೀತಾ ಕೆನ್ನೆಗೆ ಹೊಡೆದ.
ಈ ವೇಳೆ ಪ್ರಜ್ಞೆತಪ್ಪಿ ಬಿದ್ದ ಗೀತಾ, ಕೆಲವೇ ಕ್ಷಣದಲ್ಲಿ ಮೃತಪಟ್ಟರು. ಈ ಕೊಲೆಯನ್ನು ಮರೆಮಾಚಲು ಮಲ್ಲಪ್ಪ, ತನ್ನ ಪುತ್ರ ವೆಂಕಟೇಶಪ್ರಸಾದ್ ಹಾಗೂ ಲೋಕೇಶ್ ಎಂಬಾತನ ಸಹಾಯದೊಂದಿಗೆ ಟ್ರ್ಯಾಕ್ಟರ್ನಲ್ಲಿ ಮೃತದೇಹವನ್ನು ಸಾಗಿಸಿ, ಗೋಣಿಚೀಲದಲ್ಲಿ ಕಟ್ಟಿ ವರಕೋಡು ಬಳಿಯ ಕೆರೆಗೆ ಎಸೆದಿದ್ದರು. ಮೇ 22 ರಂದು ಬುಧವಾರ ಶವ ಪತ್ತೆಯಾಗಿತ್ತು.
ಮೈಸೂರು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ನೇಮಿರಾಜು, ಮೈಸೂರು ದಕ್ಷಿಣ ಠಾಣೆ ಎಸ್ಐ ವೆಂಕಟೇಶಯ್ಯ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಲೋಕೇಶನಿಗಾಗಿ ಶೋಧ ಮುಂದುವರಿಸಿದ್ದಾರೆ.

ಕುವೆಂಪುನಗರದಲ್ಲಿ ವ್ಯಕ್ತಿ ಆತ್ಮಹತ್ಯೆ
ಮೈಸೂರು: ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಕುವೆಂಪುನಗರ 2ನೇ ಹಂತ ನಿವಾಸಿ ಅಣ್ಣಯ್ಯ ಎಂಬವರ ಪುತ್ರ ಶಿವು (32) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಶಿವು ಅಂಗಡಿ ನಡೆಸುತ್ತಿದ್ದು, ಅದರಿಂದ ತುಂಬಾ ನಷ್ಟ ಅನುಭವಿಸಿದ್ದರು. ಈ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement