ಶಾಲೆ ಮುಚ್ಚದಂತೆ ಆಗ್ರಹಿಸಿ ನಿಯೋಗ
ಮೈಸೂರು: ಎನ್ಟಿಎಂಎಸ್ ಶಾಲೆ ಮುಚ್ಚದಂತೆ ಒತ್ತಾಯಿಸಿ ಬೆಂಗಳೂರಿಗೆ ನಿಯೋಗ ತೆರಳಲು ಕನ್ನಡ ಕ್ರಿಯಾ ಸಮಿತಿ ನಿರ್ಧರಿಸಿದೆ.
ಶತಮಾನಗಳ ಇತಿಹಾಸ ಇರುವ, ರಾಜ್ಯದ ಮೊಟ್ಟಮೊದಲ ಮಹಿಳಾ, ಬಾಲಕಿಯರ ಶಾಲೆಯಾದ ಮಹಾರಾಣಿ ಮಾದರಿ ಕನ್ನಡ ಶಾಲೆಯನ್ನು ಮುಚ್ಚದೆ, ಶ್ರೀ ರಾಮಕೃಷ್ಣ ಮಠಕ್ಕೆ ಕೊಟ್ಟಿರುವ ಆದೇಶವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲು ನಗರದ ಗಣ್ಯರು, ಸಾಹಿತಿಗಳು ಹಾಗೂ ಕನ್ನಡ ಕಾರ್ಯಕರ್ತರ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಸೋಮವಾರ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ ಎನ್ಟಿಎಂಎಸ್ ಶಾಲೆಗೆ ಈ ವರ್ಷ 1 ರಿಂದ 7ನೇ ತರಗತಿಗೆ ಹೊಸದಾಗಿ ದಾಖಲಾಗುವ ಮಕ್ಕಳನ್ನು ಉತ್ತೇಜಿಸಲು ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ 1 ಸಾವಿರ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಲಾಯಿತು. ಆಸಕ್ತ ಪೋಷಕರು ಸ.ರ. ಸುದರ್ಶನ್ ಅವರ ಮೊ. 9243503913 ಸಂಪರ್ಕಿಸಬಹುದು. ಸಮಿತಿಯ ಅಧ್ಯಕ್ಷ ಪ.ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಮೀರಾ ನಾಯಕ್, ಸ.ರ. ಸುದರ್ಶನ , ಸಂಸ್ಕೃತಿ ಸುಬ್ರಹ್ಮಣ್ಯ, ಪಿ.ವಿ. ನಂಜರಾಜ ಅರಸು, ಎಂ.ಬಿ. ವಿಶ್ವನಾಥ್, ಬಿ.ಎ. ಶಿವಶಂಕರ, ಡಾ. ಕೆ.ಎಸ್. ಭಗವಾನ್, ಕೆ. ಮುದ್ದುಕೃಷ್ಣ, ಶ್ರೀನಿವಾಸ ಮಿತ್ರ, ಎಂ.ಟಿ. ಜಯರಾಂ, ನೀಲಕಂಠ, ಸಿದ್ದೇಗೌಡ, ಎಂ. ಬಸವರಾಜು ಇದ್ದರು.