ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಸಂಶೋಧನೆ ಅನುಕರಣೀಯ ವಿಧಾನವಲ್ಲ'

Rashmi Kasaragodu
Updated On : 28 May 2013, 12:09 pm

ಕ.ಪ್ರ.ವಾರ್ತೆ   ಮೈಸೂರು   ಮೇ 27
ಯಾವುದೇ ಸಂಶೋಧನೆಯು ಅನುಕರಣೀಯ ವಿಧಾನವಲ್ಲ ಎಂದು ಮಂಗಳೂರು- ಗೋವಾ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಶೇಕ್ ಅಲಿ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ನಿರ್ವಹಣಾಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ನವದೆಹಲಿಯ ಐಸಿಎಸ್ಎಸ್ಆರ್ ಸಹಯೋಗದಲ್ಲಿ ಮುಕ್ತ ಗಂಗೋತ್ರಿಯ ತುಂಗಭದ್ರ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ರಿಸರ್ಚ್ ಮೆಥಡಾಲಜಿ ಮತ್ತು ಡಾಟಾ ಅನಾಲಿಸಿಸ್ ಎಂಬ ವಿಷಯ ಕುರಿತ ಹತ್ತು ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನಾ ಪದ್ಧತಿಯು ಒಂದು ಸೃಜನಾತ್ಮಕ ಕಲೆ. ಅದು ಕೇವಲ ಅನುಕರಣೀಯ ವಿಧಾನವಲ್ಲ. ಬೇರೆ ಸಂಶೋಧನೆಗಳನ್ನು ನಕಲು ಮಾಡುವುದು ಹಾಗೂ ಕೇವಲ ಕತ್ತರಿಸಿ ಅಂಟಿಸುವುದು ಎಂತಾಗಬಾರದು. ಇಂದು ಅಂತಹ ಸಂಶೋಧನಾ ಪ್ರಬಂಧಗಳು ಹೆಚ್ಚಾಗಿವೆ. ಪರಿಕಲ್ಪನೆ ಹಾಗೂ ಸೃಜನಶೀಲತೆಯಿಂದ ಉತ್ತಮ ಸಂಶೋಧನೆ ಸಾಧ್ಯ ಎಂದರು.
ಹಿಂದೆ ಉತ್ತಮ ಸಂಶೋಧನೆ: ಈ ಹಿಂದೆ ದೇಶದಲ್ಲಿ  ಕೇವಲ 37 ವಿವಿಗಳಿದ್ದ ಸಂದರ್ಭದಲ್ಲಿ ಉತ್ತಮ ಸಂಶೋಧನಗಳು ಕಾಣಬಹುದಾಗಿತ್ತು. ಆದರೆ ಇಂದು 600-700 ವಿವಿಗಳಿದ್ದರೂ ಉತ್ಕೃಷ್ಟ ಸಂಶೋಧನೆ ದೊರಕುವುದು ದುರ್ಲಬವಾಗಿದೆ. ಇದಕ್ಕೆ ಇಂದಿನ ಕಳಪೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯೇ ಕಾರಣ ಎಂದು ವಿಷಾದಿಸಿದರು. ಸಂಶೋಧನೆ ನಡೆಸುವವರು ಮೊದಲಿಗೆ ತಾವು ಆಯ್ಕೆ ಮಾಡಿಕೊಳ್ಳುವ ವಿಷಯ ಚೆನ್ನಾಗಿರಬೇಕು. ಆ ವಿಷಯವು ವಿಶ್ಲೇಷಣೆ ಹಾಗೂ ಚರ್ಚಿತವಾಗುವಂತಿರಬೇಕು. ಅಲ್ಲದೆ ಸಂಶೋಧನೆ ನಂತರ ಅಂತಿಮವಾಗಿ ಓದುವವರಿಗೂ ಹಾಗೂ ಅಧ್ಯಯನ ಮಾಡುವವರಿಗೂ ಸಮರ್ಪಕ ಉತ್ತರ ದೊರಕುವಂತಿರಬೇಕು. ಬಹುಮುಖ್ಯವಾಗಿ ಅಸ್ಪಷ್ಟ ಹಾಗೂ ಗೊಂದಲ ಮೂಡಿಸುವಂತಿರಬಾರದು ಎಂದರು.ಉತ್ತಮ ಪರಿಕಲ್ಪನೆ ಹೊಂದಿದಾಗ ಶ್ರೇಷ್ಠ ಸಂಶೋಧನೆ ಮೂಡಲು ಸಾಧ್ಯ ಎಂದು ಖ್ಯಾತ ವಿಜ್ಞಾನಿ ಐನ್ಸ್ಟೈನ್ ಹೇಳಿರುವುದನ್ನು ಹಾಗೂ ಯಾವುದೇ ಪರಿಶ್ರಮವಿಲ್ಲದೆ ಯಶಸ್ಸು ಸಾಧ್ಯವಿಲ್ಲವೆಂದು ಹೇಳಿರುವ ಸರ್ ಎಂ. ವಿಶ್ವೇಶ್ವರಯ್ಯ ಅವರ ಅನುಭವದ ಮಾತುಗಳನ್ನು ಇಲ್ಲಿ ಗಮನಿಸಬೇಕು ಎಂದ ಅವರು, ಸಂಶೋಧನೆಯಿಂದ ಜ್ಞಾನ ಹಾಗೂ ಸೃಜನಶೀಲತೆ ಹೆಚ್ಚಾಗಲಿದ್ದು, ಈ ಸಂಬಂಧ ಸತತ ಪರಿಶ್ರಮದಿಂದ ಮುನ್ನಡೆಯುವಂತೆ ಅವರು ಸಲಹೆ ನೀಡಿದರು.
ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಮುಖ್ಯಸ್ಥ ಹಾಗೂ ಕಾರ್ಯಾಗಾರದ ಸಂಯೋಜನಾಧಿಕಾರಿ ಡಾ.ಸಿ. ಮಹದೇವಸ್ವಾಮಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement