ಇಂದು ಹಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು: ಕೆಪಿಟಿಸಿಎಲ್ ಮೇ 29ರಂದು 66,11 ಕೆವಿ ದಕ್ಷಿಣ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಈ ಕೆಳಕಂಡ ಪ್ರದೇಶಗಳಲ್ಲಿ ಅಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. ನಂಜುಮಳಿಗೆ ವೃತ್ತ, ಲಕ್ಷ್ಮಿಪುರಂ, ವಿದ್ಯಾರಣ್ಯಪುರಂ, ನಾರಾಯಣಶಾಸ್ತ್ರಿ ರಸ್ತೆ, ಕಾಕರವಾಡಿ, ನಾಲಾಬೀದಿ, ಹೊಸಕೇರಿ, ಅಗ್ರಹಾರ, ತ್ಯಾಗರಾಜ ರಸ್ತೆ, ಇಂಡಸ್ಟ್ರೀಯಲ್ ಸಬರ್ಬ್, ವಿಶ್ವೇಶ್ವರಯ್ಯನಗರ, ಕೃಷ್ಣಮೂರ್ತಿಪುರಂ, ನಾಚನಹಳ್ಳಿಪಾಳ್ಯ, ಜೆ.ಪಿ. ನಗರ, ಕುಪ್ಪಲೂರು, ಗುಂಡೂರಾವ್ ನಗರ, ಕನಕಗಿರಿ, ಅಶೋಕಪುರಂ, ಸರಸ್ವತಿಪುರಂ, ರೇಲ್ವೆ ಕಾರ್ಯಾಗಾರ, ಮಹದೇವಪುರ, ರಮಾಬಾಯಿನಗರ, ಶ್ರೀರಾಂಪುರ, ಜಯನಗರ, ಕೆ.ಜಿ. ಕೊಪ್ಪಲು, ಶಿವಪುರ, ದೇವಲಾಪುರ ಹೋಬಳಿ ಮತ್ತು ಭಾಗಶಃ ಆದಿಚುಂಚನಗಿರಿ ರಸ್ತೆ ಸುತ್ತಮುತ್ತಲಿನ ಪ್ರದೇಶಗಳು.
ಯೋಗಾಸನ, ಪ್ರಾಣಾಯಾಮ
ಮೈಸೂರು: ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷದ ಅಂಗವಾಗಿ ವಿವೇಕಾನಂದ ಕೇಂದ್ರದ ವತಿಯಿಂದ ಮಹಿಳೆಯರಿಗಾಗಿ ವಿಶೇಷ ಯೋಗಾಸನ ಮತ್ತು ಪ್ರಾಣಾಯಾಮ ತರಗತಿಯನ್ನು ಜೂ. 3ರಿಂದ ಜಯನಗರದ ಕಾರ್ಯಾಲಯದಲ್ಲಿ ಪ್ರತಿದಿನ ಬೆಳಗ್ಗೆ 11 ರಿಂದ 12 ರವರೆಗೆ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 9449488228 ಸಂಪರ್ಕಿಸಬಹುದು.
ಸಂತಾಪ
ಮೈಸೂರು: ನಗರಪಾಲಿಕೆಯ ಯೋಜನಾ ವಿಭಾಗದಲ್ಲಿ ಸಹಾಯಕರಾಗಿದ್ದ ನಯೀಮ್ ಪಾಶಾ ಅವರ ನಿಧನಕ್ಕೆ ಮೈಸೂರು ಗ್ರಾಹಕರ ಪರಿಷತ್ ಸಂತಾಪ ಸೂಚಿಸಿದೆ. ಪಾಶಾ ಅವರು ಸಕಾರಾತ್ಮಕವಾಗಿದ್ದು, ವಿನಯಶೀಲರಾಗಿದ್ದರು. ಅವರ ನಿಧನರಿಂದ ಒಬ್ಬ ನಿಷ್ಠ ನೌಕರರನ್ನು ಕಳೆದುಕೊಂಡಂತಾಗಿದೆ ಎಂದು ಪರಿಷತ್ನ ಆರ್. ಚಂದ್ರಪ್ರಕಾಶ್ ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ: ಸುಮುಖ್ ಉತ್ತಮ ಸಾಧನೆ
ಮೈಸೂರು: ಈ ಸಾಲಿನ ಸಿಬಿಎಸ್ಸಿ 10ನೇ ತರಗತಿ ಪರೀಕ್ಷೆಯಲ್ಲಿ ಇಲವಾಲದ ಸಂತ ಜೋಸೆಪ್ ಕೇಂದ್ರೀಯ ಶಾಲೆಯ ವಿದ್ಯಾರ್ಥಿ ಆರ್. ಸುಮುಖ್ ಭಾರದ್ವಾಜ್ ಎಲ್ಲಾ ವಿಷಯಗಳಲ್ಲಿಯೂ ಸಿಜಿಪಿಎ 10 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ನಗರದ ಆರ್. ರವೀಂದ್ರ ಹಾಗೂ ಎಸ್. ವೀಣಾ ಅವರ ಪುತ್ರ.