ಒಬಿಸಿ ಆದಾಯ ಮಿತಿ ಏರಿಕೆಗೆ ಆಗ್ರಹ
ಮೈಸೂರು: ರಾಜ್ಯ ಸರ್ಕಾರವು ಹಿಂದುಳಿದ ವರ್ಗದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಪಡೆಯಲು ಇರುವ ಕೆನೆಪದರ ನೀತಿಯ ಆದಾಯ ಮಿತಿ ಏರಿಕೆ ಮಾಡುವಂತೆ ಕಾಯಕಯೋಗಿ ವೇದಿಕೆ ಆಗ್ರಹಿಸಿದೆ. ಕೆನೆಪದರ ನೀತಿಯಂತೆ ವಾರ್ಷಿಕ ಆದಾಯ ಹಾಲಿ ಮೂರುವರೆ ಲಕ್ಷ ರು. ಗೆ ಮಿತಿಗೊಳಿಸಲಾಗಿದೆ. ಹೊಸ ವೇತನಶ್ರೇಣಿ ನೀಡಿಕೆಯಿಂದಾಗಿ ಸಿ ಮತ್ತು ಡಿ ವರ್ಗದ ಬಹಳಷ್ಟು ನೌಕರರು ಈ ಮಿತಿ ದಾಟಿರುವುದರಿಂದ ಅವರು ಕೆನೆಪದರ ನೀತಿಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವೇದಿಕೆ ಕಾರ್ಯಾಧ್ಯಕ್ಷ ಮನೋಹರ್ ತಿಳಿಸಿದ್ದಾರೆ.