ನೂರಕ್ಕೂ ಹೆಚ್ಚು ಮತದಾರರ ಹೆಸರು ನಾಪತ್ತೆ!
ಬೈಲುಕುಪ್ಪೆ: ಬೈಲುಕುಪ್ಪೆ ಪಂಚಾಯಿತಿ ವ್ಯಾಪ್ತಿಯ ದೊಡ್ಡಹರವೆ ಗ್ರಾಮದಲ್ಲಿ ಸುಮಾರು 100ಕ್ಕೂ ಹೆಚ್ಚು ಮತದಾರರ ಹೆಸರು ಇಲ್ಲದೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಹಿಂತಿರುಗಿದ ಘಟನೆ ದೊಡ್ಡಹರವೆ ಗ್ರಾಮದಲ್ಲಿ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ರೀತಿ ಹೆಸರು ಗೊಂದಲವಿಲ್ಲದೆ ಮತ ಚಲಾಯಿಸಿದ್ದರು. ಈ ಬಾರಿ ಒಂದು ಕುಟುಂಬದಲ್ಲಿ ಒಬ್ಬರ ಹೆಸರು ಮತಪಟ್ಟಿಯಲ್ಲಿದ್ದು, ಇನ್ನೊಬ್ಬರ ಹೆಸರು ಇರಲಿಲ್ಲ. ಈ ರೀತಿ ಅಧಿಕಾರಿಗಳು ಗೊಂದಲ ಸೃಷ್ಟಿ ಮಾಡಿದ್ದಾರೆಂದು ಮತದಾರರು ದೂರಿದರು. ರೇಣುಕಮ್ಮ ಹಾಗೂ ಪುತ್ರ ಅಶೋಕ ಕಳೆದ ಬಾರಿ ಮತ ಹಾಕಿದ್ದೇವೆ. ಆದರೆ, ಈ ಬಾರಿ ನಮ್ಮ ಹೆಸರನ್ನು ಕೈಬಿಟ್ಟಿರುವುದು ಏಕೆ ಎಂದು ಪ್ರಶ್ನಿಸಿದರು. ಅಧಿಕಾರಿಗಳು ಇದಕ್ಕೆ ನೇರ ಹೊಣೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ನಮ್ಮ ಹೆಸರನ್ನು ಬದಲಿ ಸೇರಿಸದೆ ಇದ್ದಲ್ಲಿ, ಪಿರಿಯಾಪಟ್ಟಣ ತಹಸೀಲ್ದಾರ್ ಕಚೇರಿಗೆ ಎದುರು ಹೋರಾಟ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದರು.