ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಬೇಡಿ

Rashmi Kasaragodu
Updated On : 28 May 2013, 11:59 am

ಕ.ಪ್ರ.ವಾರ್ತೆ   ಮೈಸೂರು   ಮೇ 28
ಮೈಸೂರು: ವಿದ್ಯಾರ್ಥಿಗಳಿಗೆ ಒತ್ತಡಮುಕ್ತ ವಾತಾವರಣ ನಿರ್ಮಾಣವಾಗಬೇಕು ಎಂದು ಮೈಸೂರು ವಿವಿಯ ಇಎಂಎಂಆರ್‌ಸಿ ನಿರ್ದೇಶಕ ಪ್ರೊ. ಎ. ಬಾಲಸುಬ್ರಹ್ಮಣ್ಯನ್ ಹೇಳಿದರು.
ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕವು ಮಹಾರಾಜ ಪದವಿಪೂರ್ವ ಕಾಲೇಜಿನ ಕೃಷ್ಣರಾಜ ಸಭಾಂಗಣದಲ್ಲಿ ಏರ್ಪಡಿಸಿದ್ದ ಶೈಕ್ಷಣಿಕ ಸಮ್ಮೇಳನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಮಾತನಾಡಿ, ತಮ್ಮ ಮಕ್ಕಳು ಹೆಚ್ಚಿನ ಅಂಕ ಗಳಿಸಬೇಕು ಎಂಬುದಕ್ಕೆ ಮಾತ್ರ ಪೋಷಕರು ಆದ್ಯತೆ ನೀಡುತ್ತಿದ್ದಾರೆಯೇ ಹೊರತು ಅವರಲ್ಲಿ ಸೃಜನಶೀಲತೆ ಉಂಟು ಮಾಡುವ ಚಟುವಟಿಕೆಗಳತ್ತ ಆಸಕ್ತಿ ವಹಿಸುತ್ತಿಲ್ಲ ಎಂದರು.
ಮಾನಸಿಕ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದರಿಂದ ದೈಹಿಕ ವಿಕಾಸ ಕಾಣದಾಗಿದೆ. ಶಾಲಾ ಕಾಲೇಜುಗಳಲ್ಲಿ ಬೋಧಕರ ಸಂಖ್ಯೆ ಹೆಚ್ಚಾಗಿರುತ್ತದೆ. ದೈಹಿಕ ಶಿಕ್ಷಣ ಶಿಕ್ಷಕರ ಸಂಖ್ಯೆ ತೀರ ಕಡಿಮೆ ಇರುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ನೂರಾರು ಕನಸುಗಳಿರುತ್ತವೆ. ಆದರೆ, ಅವೆಲ್ಲವನ್ನು ಒಟ್ಟಾಗಿ ಈಡೇರಿಸಿಕೊಳ್ಳುವುದು ಅಸಾಧ್ಯ. ಅದನ್ನು ಹಂತ- ಹಂತವಾಗಿ ಈಡೇರಿಸಿಕೊಂಡು ಮುನ್ನೆಡೆಯಬೇಕು ಹಾಗೂ ಗುರಿ ಮುಟ್ಟುವ ದಿಕ್ಕಿನಲ್ಲಿ ಸಾಗಬೇಕು ಎಂದು ಆಶಿಸಿದರು.


ಪ್ರತಿಭಾವಂತರಿಗೆ ಪುರಸ್ಕಾರ


ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿ ತೇರ್ಗಡೆಯಾಗಿರುವ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ಮಂಗಳವಾರ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕವು  ಮಹಾರಾಜ ಪದವಿಪೂರ್ವ ಕಾಲೇಜಿನ ಕೃಷ್ಣರಾಜ ಸಭಾಂಗಣದಲ್ಲಿ ಏರ್ಪಡಿಸಿದ್ದ ಶೈಕ್ಷಣಿಕ ಸಮ್ಮೇಳನದಲ್ಲಿ ಮೈಸೂರು ವಿವಿಯ ಇಎಂಎಂಆರ್‌ಸಿ ನಿರ್ದೇಶಕ ಪ್ರೊ. ಎ. ಬಾಲಸುಬ್ರಹ್ಮಣ್ಯನ್ ಅವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿದರು.   
ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದಿರುವ ಮೈಸೂರು ನಗರ ವಿಭಾಗದ ಅಂಕಿತ್ ಗುರುಪ್ರಸಾದ್, ನಚಿಕೇತ್ ದೀಕ್ಷಿತ್, ಬಿ.ಎಸ್ ದೀಕ್ಷಿತ್, ಎನ್. ಮನೋಹರ್, ಅನಿರುದ್ಧಿನ್, ಎನ್. ಶಿವಕುಮಾರ್ ಹಾಗೂ ಲೋಕೇಶ್ವರಿ, ಗ್ರಾಮೀಣ ವಿಭಾಗದಲ್ಲಿ ಎಚ್. ಆರ್. ವೈಷ್ಣವಿ, ಎಸ್. ಭಾರತಿ, ಎನ್. ಡಿ. ಮೌನ, ಸಿ.ಕೆ. ಭವಾನಿ ಹಾಗೂ ಎಸ್. ರವಿ ಅವರು ಪುರಸ್ಕಾರಕ್ಕೆ ಭಾಜನರಾದರು.    
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಮೈಸೂರು ಮಹಾರಾಜ ಪಿಯು ಕಾಲೇಜಿನ ಎಂ. ನಾಗರಾಜು, ರಂಗರಾವ್ ಕಾಲೇಜಿನ ಬಿ.ಎಸ್. ನಾಗರತ್ನಕುಮಾರಿ, ಎಚ್.ಡಿ. ಕೋಟೆ ಸರ್ಕಾರಿ ಕಾಲೇಜಿನ ಚಲುವಯ್ಯ, ಹಾರನಹಳ್ಳಿ ಸರ್ಕಾರಿ ಕಾಲೇಜಿನ ಕೃಷ್ಣಯ್ಯ, ಸಾಲಿಗ್ರಾಮ ಸರ್ಕಾರಿ ಕಾಲೇಜಿನ ಭಾರತಿ ಎಕ್ಕುಂಡಿ, ಕಿತ್ತೂರು ಸರ್ಕಾರಿ ಕಾಲೇಜಿನ ಚಂದ್ರಪ್ಪ, ಕೆಸರೆ ಸರ್ಕಾರಿ ಕಾಲೇಜಿನ ಜಯಶ್ರೀ, ಗಾವಡಗರೆ ಸರ್ಕಾರಿ ಕಾಲೇಜಿನ ಮಹೇಶ್ ಆರಾಧ್ಯ, ರಾವಂದೂರು ಸರ್ಕಾರಿ ಕಾಲೇಜಿನ ನಿಸಾರ ಅಹಮದ್ ಖಾನ್, ಕರಿಮುದ್ದನಹಳ್ಳಿ ಸರ್ಕಾರಿ ಕಾಲೇಜಿನ ದಯಾನಿಧಿ ಹಾಗೂ ರತ್ನಪುರಿ ಸರ್ಕಾರ ಕಾಲೇಜಿನ ಮಾಲತೇಶ್ ಅವರನ್ನು ಸನ್ಮಾನಿಸಲಾಯಿತು.   ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಕೆ.ಎಂ. ಪುಟ್ಟು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹಾಯಕ ನಿರ್ದೇಶಕಿ ವಿಜಯಮ್ಮ, ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಎಸ್. ಭಾನುಪ್ರಕಾಶ್, ಕಾರ್ಯದರ್ಶಿ ಜಿ. ನಂಜುಂಡಸ್ವಾಮಿ, ಖಜಾಂಚಿ ಎಂ. ನಾಗರಾಜು ಇದ್ದರು. ಸಂಘದ ಅಧ್ಯಕ್ಷ ಕೆ.ಎನ್. ವಾಸುದೇವ ಸ್ವಾಗತಿಸಿದರು. ಪ್ರಾಂಶುಪಾಲ ಶ್ರೀಕಂಠಶರ್ಮ ನಿರೂಪಿಸಿದರು.
ನಂತರ ಮಧ್ಯಾಹ್ನ ಡಿಡಿಪಿಯು ಕೆ.ಎಂ. ಪುಟ್ಟು ಅಧ್ಯಕ್ಷತೆಯಲ್ಲಿ ಸಂಘದ 2012- 13ನೇ ಸಾಲಿನ ಸರ್ವ ಸದಸ್ಯರ ಸಭೆ ನಡೆಯಿತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement