ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಉತ್ತಮ ಯೋಜನೆ ರೂಪಿಸಲು ಮನವಿ

Rashmi Kasaragodu
Updated On : 30 May 2013, 12:39 pm

ಕ.ಪ್ರ.ವಾರ್ತೆ   ಮೈಸೂರು   ಮೇ 29
ಕಪಡಿಯುವ ನೀರಿಗೆ ಸಂಬಂಧಿಸಿದಂತೆ ಉತ್ತಮ ಯೋಜನೆ ರೂಪಿಸಬೇಕು ಎಂದು ಎಚ್.ಎಸ್. ಮಂಜುನಾಥ ಶೆಟ್ಟಿ ಮನವಿ ಮಾಡಿದ್ದಾರೆ.
ಕೆಆರ್ಎಸ್ ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿಲ್ಲ. ತಮಿಳುನಾಡು ಸರ್ಕಾರ ಸುಳ್ಳು ಪ್ರಮಾಣ ಪತ್ರ ನೀಡಿ ನೀರು ಕೇಳಿದ ಕೂಡಲೆ ನೀರು ಕೊಡದೆ ತಡೆಯೊಡ್ಡಬೇಕಿತ್ತು. ಕೃಷ್ಣ, ಗೋದಾವರಿ, ಮಹಾದಾಯಿ ಸೇರಿದಂತೆ ಅನೇಕ ನದಿಗೆ ಯೋಜನೆ ರೂಪಿಸಿದ್ದರೆ ಈಗ ನೀರಿನ ಸಮಸ್ಯೆ ಬರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ನದಿ ನೀರು ಅನವಶ್ಯಕವಾಗಿ ಸಮುದ್ರ ಸೇರುವ ಬದಲು ತಡೆಗೋಡೆ ನಿರ್ಮಿಸಿ ದೊಡ್ಡ ಕೊಳವೆಗಳ ಮೂಲಕ ನೀರು ಬಳಸಿಕೊಳ್ಳಬೇಕು. ಅಲ್ಲದೆ, ಕೆಆರ್ಎಸ್ನಲ್ಲಿ ಸಾಕಷ್ಟು ಹೂಳು ತುಂಬಿದ್ದು, ಹೂಳು ತೆಗೆದರೆ ಸುಮಾರು 5 ರಿಂದ 6 ಟಿಎಂಸಿ ನೀರು ನಿಲ್ಲುವ ಸಾಧ್ಯತೆ ಇದೆ. ಆದ್ದರಿಂದ ಮೈಸೂರು ನಗರಕ್ಕೆ ಶಾಶ್ವತವಾಗಿ ನೀರಿನ ಸಮಸ್ಯೆ ಹೋಗಲಾಡಿಸಲು ಮತ್ತು ಬಗೆಹರಿಸಲು ಚಾಮರಾಜ, ನರಸಿಂಹರಾಜ ಮತ್ತು ಕೃಷ್ಣರಾಜ ಕ್ಷೇತ್ರದ ಶಾಸಕರು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement