ಟೇಕ್ವಾಂಡೊ ಕ್ರೀಡಾ ತರಬೇತಿ
ಮೈಸೂರು: ಕೇಂದ್ರ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಪ್ರಾಧಿಕಾರದಿಂದ ಅಂಗೀಕೃತವಾದ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯು ಜೂ. 9 ರಿಂದ ಟೇಕ್ವಾಂಡೊ ಕ್ರೀಡೆಯ ತರಬೇತಿ ಆಯೋಜಿಸಿದೆ.
ಇಲ್ಲಿನ ಕುವೆಂಪುನಗರದ ಸಿ ಮತ್ತು ಡಿ ಬ್ಲಾಕ್ನ ಪಡುವಣ ರಸ್ತೆಯ ನಂ. 17,6ನಲ್ಲಿರುವ ಶಿಬಾನೀಸ್ ಸ್ಕೂಲ್ ಆಫ್ ಗೋಲ್ನಲ್ಲಿ ಈ ಕ್ರೀಡೆಯ ತರಬೇತಿ ನಡಯಲಿದೆ. ಪ್ರತಿ ಮಂಗಳವಾರದಿಂದ ಗುರುವಾರ ಬೆಳಗ್ಗೆ 6.30 ರಿಂದ 7.30ರವರೆಗೆ ಮತ್ತು ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 4 ರಿಂದ 6ರವರೆಗೆ ನೀಡಲಿದೆ. ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಬಾಲಕ, ಬಾಲಕಿಯರು ಈ ಕ್ರೀಡೆಯ ತರಬೇತಿ ಪಡೆಯಬಹುದು. ಮಹಿಳೆಯರ ಆತ್ಮ ರಕ್ಷಣೆಗಾಗಿ ಪ್ರತ್ಯೇಕ ತರಬೇತಿ ನೀಡಲಾಗುವುದು.
ಆಸಕ್ತರು ಟೇಕ್ವಾಂಡೊ ಸಂಸ್ಥೆಯ ಅಧಕ್ಷ ವಾಸು ಕಶ್ಯಪ್, ಮೊ. 8105721966 ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.