ಪ್ರತಿಭಾವಂತ ಕ್ರೀಡಾಪಟುಗೆ ನೆರವು ಕೋರಿಕೆ
ಮೈಸೂರು: ಜೂ. 13ರಂದು ಸಿಂಗಾಪುರದಲ್ಲಿ ನಡೆಯುವ ಸ್ಪೋರ್ಟ್ಸ್, ಏರೋಬಿಕ್ಸ್ ಮತ್ತು ಫಿಟ್ನೆಸ್ ಸ್ಪರ್ಧೆಯಲ್ಲಿ ಮೈಸೂರಿನ ಪ್ರತಿಭಾವಂತ ಕ್ರೀಡಾಪಟು ಕೆ. ಕೃಷ್ಣ ಭಾಗವಹಿಸಲು ಸಹೃದಯಿಗಳಿಂದ ಆರ್ಥಿಕ ಸಹಾಯ ಕೋರಿದ್ದಾರೆ.
ರಾಮಕೃಷ್ಣನಗರ ನಿವಾಸಿ ಕೃಷ್ಣಮೂರ್ತಿ ಎಂಬವರ ಪುತ್ರ ಕೆ. ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾರೆ. ಆದರೆ, ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಕೃಷ್ಣ ಅವರ ಕುಟುಂಬ ಬಡತನ ಬೇಗೆಯಿಂದ ಬಳಲುತ್ತಿದ್ದು ಪ್ರತಿಭೆ ಕಮರುತ್ತಿದೆ. ಹೀಗಾಗಿ ಕೊಡುಗೈ ದಾನಿಗಳು ಪ್ರತಿಭೆಯ ಅನಾವರಣಕ್ಕೆ ನೆರವಾಗಬೇಕಿದೆ. ಆಸಕ್ತರು ಖಾತೆ ಸಂಖ್ಯೆ- 2334101008088, ಕೆನರಾ ಬ್ಯಾಂಕ್, ಶ್ರೀರಾಂಪುರ ಶಾಖೆ, ಮೈಸೂರು. ಇಲ್ಲಿಗೆ ಹಣ ಸಂದಾಯ ಮಾಡಬಹುದಾಗಿದೆ. ಮೊ. 7899941377, 7829610500.