ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಕ್ಕಳ ಅಪರಾಧಗಳು, ಸಂಶೋಧನಾ ವರದಿ ಬಿಡುಗಡೆ

Rashmi Kasaragodu
Updated On : 30 May 2013, 12:34 pm

ಕ.ಪ್ರ. ವಾರ್ತೆ   ಮೈಸೂರು   ಮೇ 29
ಬಾಲನ್ಯಾಯ ಮಂಡಳಿ ಸದಸ್ಯ ಮತ್ತು ಪೀಪಲ್ಸ್ ಲೀಗಲ್ ಫೋರಂ ನಿರ್ದೇಶಕ ಪಿ.ಪಿ. ಬಾಬುರಾಜ್ ಅವರು ಮಕ್ಕಳ ಅಪರಾಧಗಳ ಮೂಲ ಕಾರಣಗಳು ಎಂಬ ವಿಷಯ ಕುರಿತು ನಡೆಸಿದ ಸಂಶೋಧನಾ ವರದಿಯನ್ನು ಗೃಹ ಸಚಿವ ಕೆ.ಜೆ. ಜಾರ್ಜ್ ಬೆಂಗಳೂರಿನ ಎಕೋ ಸಂಸ್ಥೆ ಆವರಣದಲ್ಲಿ ಬಿಡುಗಡೆ ಮಾಡಿದರು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿ ಕುರಿತ ಕೈಪಿಡಿಯನ್ನೂ ಅವರು ಬಿಡುಗಡೆ ಮಾಡಿದರು. 2500 ಮಕ್ಕಳನ್ನು ಒಳಗೊಂಡ ಈ ಸಂಶೋಧನೆಯು ಬಾಲನ್ಯಾಯ ಕ್ಷೇತ್ರದಲ್ಲಿ ನಡೆದ ಬೃಹತ್ ಪ್ರಯತ್ನ.
ಬೆಂಗಳೂರಿನ ಸರ್ಕಾರಿ ವೀಕ್ಷಣಾಲಯದಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಕಾನೂನು ಸಂಘರ್ಷಕ್ಕೊಳಗಾದ 2500 ಮಕ್ಕಳನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಎಕೊ ಸಂಸ್ಥೆ ಯುನಿಸೆಫ್ ಸಹಯೋಗದೊಂದಿಗೆ ಕೈಗೊಂಡ ಸಂಶೋಧನೆಯನ್ನು 6 ತಿಂಗಳಲ್ಲಿ ಪೂರೈಸುವಂತೆ ಬಾಬುರಾಜ್ ಅವರಿಗೆ ಸಂಸ್ಥೆ ವಹಿಸಿತ್ತು. ಕಾನೂನಿನೊಡನೆ ಸಂಘರ್ಷಕ್ಕೆ ಒಳಗಾದ ಮಕ್ಕಳು, ಅವರ ಪೋಷಕರು, ವೀಕ್ಷಣಾಲಯದ ಸಿಬ್ಬಂದಿ, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಸಮುದಾಯ ಕಾರ್ಯಕರ್ತರು, ಮಕ್ಕಳ ಕಲ್ಯಾಣ ಅಧಿಕಾರಿಗಳು ಪೊಲೀಸ್ ಉಪನಿರೀಕ್ಷಕರೊಂದಿಗೆ ಸಭೆಗಳು, ತಜ್ಞರೊಂದಿಗೆ ಸಂದರ್ಶನ, 50 ಮಕ್ಕಳ ಅನುಭವ ಕಥೆಗಳು ಸಂಶೋಧನೆಯಲ್ಲಿದೆ. ಫಲಿತಾಂಶಗಳು ಮತ್ತು ಶಿಫಾರಸ್ಸಿನ ವರದಿಯನ್ನು ಸಚಿವ ಜಾರ್ಜ್ ಶ್ಲಾಘಿಸಿದರು.
ಕೆ.ಆರ್. ಪುರಂ ಶಾಸಕ ಬೈರತಿ ಬಸವರಾಜ್, ಯನಿಸೆಫ್ ಪ್ರತಿನಿಧಿ ಸೋನಿ ಜಾರ್ಜ್, ಎಕೋ ಸಂಸ್ಥೆ ನಿರ್ದೇಶಕ ಫಾ. ಆ್ಯಂಟನಿ ಸೆಬಾಸ್ಟಿಯನ್, ಸ್ವಾಮಿ ಪದ್ಮಪ್ರಕಾಶ ಜ್ಞಾನ ತಪಸ್ವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement