ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮತ ಎಣಿಕೆಗೆ ಸಕಲ ಸಿದ್ಧತೆ

Rashmi Kasaragodu
Updated On : 30 May 2013, 12:42 pm

ಕ.ಪ್ರ. ವಾರ್ತೆ   ಪಿರಿಯಾಪಟ್ಟಣ   ಮೇ 29
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ಮೇ 31 ನಡೆಯುವ ಹಿನ್ನಲೆಯಲ್ಲಿ ಮತಯಂತ್ರಗಳಿರುವ ಪುಷ್ಪ ಶಾಲೆಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಮತ ಎಣಿಕೆಯ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಶಾಲೆಯ ಅಕ್ಕಪಕ್ಕದ ರಸ್ತೆಯ ಸುತ್ತ ಜನರನ್ನು ನಿಯಂತ್ರಸಿವ ನಿಟ್ಟಿನಲ್ಲಿ ಕಬ್ಬಿಣದ ಪೈಪು ಜೋಡಿಸಲಾಗಿದೆ. ಮೇ 28ರಂದು 205 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ತಾಲೂಕಿನ ಮಲ್ಲಿನಾಥಪುರ ಮತಗಟ್ಟೆ ಸಂಖ್ಯೆ 141ರಲ್ಲಿ ಅತಿ ಹೆಚ್ಚು ಶೇ. 97.08 ಮತದಾನವಾಗಿದ್ದು, ತಾಲೂಕಿನ ರಾವಂದೂರು ಗ್ರಾಮದ ಮತಗಟ್ಟೆ ಸಂಖ್ಯೆ 87ರಲ್ಲಿ ಅತಿ ಕಡಿಮೆ ಶೇ. 64.93 ಮತದಾನವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement