ಶಾರ್ಟ್ ಸರ್ಕ್ಯೂಟ್ನಿಂದ ಕಾರು ಭಸ್ಮ
ಪಿರಿಯಾಪಟ್ಟಣ: ರಿಪೇರಿಯ ನಂತರ ಕಾರನ್ನು ಚಲಾಯಿಸಿ ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ವೈರ್ಗಳಲ್ಲಿ ವಿದ್ಯುತ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡು ಮಾರುತಿ ಕಾರು ಸಂಪೂರ್ಣ ಸುಟ್ಟುಹೋಗಿರುವ ಘಟನೆ ಪಟ್ಟಣದ ಉಪ್ಪಾರಗೇರಿ ಬಳಿ ಜರುಗಿದೆ. ತಾಲೂಕಿನ ಬೆಟ್ಟದಪುರ ಗ್ರಾಮದ ವೆಂಕಟೇಶ್ ಎಂಬವರಿಗೆ ಸೇರಿದ ಮಾರುತಿ ವ್ಯಾನ್ ಸುಟ್ಟು ಹೋಗಿದ್ದು, ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಮ್ಯೆಕಾನಿಕ್ ಮಂಜು ಕಾರನ್ನು ರಿಪೇರಿ ಮಾಡಿದ ನಂತರ ಪಟ್ಟಣದ ಉಪ್ಪಾರಗೇರಿ ಬಳಿಯ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಚಲಾಯಿಸಿ ಪರಿಶೀಲಿಸುತ್ತಿದ್ದ ಸಂದರ್ಭಲ್ಲಿ ಕಾರಿನ ವೈರ್ಗಳು ಶಾರ್ಟ್ ಸರ್ಕ್ಯೂಟ್ನಿಂದಾಗಿ ಸುಟ್ಟುಹೋಗಿದೆ ಎಂದು ಅಗ್ನಶಾಮಕ ಠಾಣೆಯ ಠಾಣಾಧಿಕಾರಿ ಎಂ.ಎ. ಸಿದ್ದೇಗೌಡ ತಿಳಿಸಿದ್ದಾರೆ. ವ್ಯಾನಿನಲ್ಲಿ ಗ್ಯಾಸ್ ಟ್ಯಾಂಕ್ಅನ್ನು ಅಳವಡಿಸಲಾಗಿದ್ದು, ಟ್ಯಾಂಕಿನಲ್ಲಿ ಗ್ಯಾಸ್ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.