ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಂಜಯ್ ಕೊಲೆ: ತನಿಖೆಗೆ ಹೊಸ ತಂಡ

Rashmi Kasaragodu
Updated On : 30 May 2013, 12:39 pm

ಮೈಸೂರು: ಹಣಕ್ಕಾಗಿ ಪಿಯುಸಿ ವಿದ್ಯಾರ್ಥಿ ಸಂಜಯ್ನನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣದ ತನಿಖೆಗಾಗಿ ಹೊಸದೊಂದು ತಂಡ ರಚಿಸಿರುವುದಾಗಿ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ಹೇಳಿದರು.
ವಿದ್ಯಾಶ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಂಜಯ್ನನ್ನು ಕಳೆದ ಡಿ. 12ರಂದು ಅಪಹರಿಸಿ, ಹತ್ಯೆ ಮಾಡಿದ್ದರು. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗಿ 5 ತಿಂಗಳು ಕಳೆದರೂ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ವಿಪರ್ಯಾಸವೆಂದರೆ ಆರೋಪಿಗಳ ಬಗ್ಗೆ ಸಣ್ಣ ಸುಳಿವು ಸಹ ಪೊಲೀಸರಿಗೆ ಸಿಕ್ಕಿಲ್ಲ.
ಸಿಸಿಬಿ ಘಟಕ, ಎನ್.ಆರ್. ಉಪ ವಿಭಾಗ ಹಾಗೂ ವಿಜಯನಗರ ಠಾಣೆ ಪೊಲೀಸರನ್ನು ಸೇರಿಸಿ ಹೊಸದೊಂದು ತಂಡ ರಚಿಸಿ, ತನಿಖೆ ನಡೆಸಲಾಗುತ್ತಿದೆ ಎಂದ ಪೊಲೀಸ್ ಆಯುಕ್ತರು, ನೂರಕ್ಕೆ ನೂರು ಪ್ರಕರಣಗಳು ಎಲ್ಲೂ ಪತ್ತೆಯಾಗುವುದಿಲ್ಲ, ಪ್ರಯತ್ನ ಮುಂದುವರಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement