ಸೂರ್ಯ ಶಿಖರದಲ್ಲಿ ಮಕ್ಕಳ ಚಾರಣ
ಕ.ಪ್ರ.ವಾರ್ತೆ ಮೈಸೂರು ಮೇ 29 ದೆಹಲಿಯ ಅಡ್ವೆಂಚರ್ ಆಕ್ಟಿವಿಟಿ ಪ್ರಮೋಟರ್ ವತಿಯಿಂದ ಉತ್ತರಖಾಂಡ್ ರಾಜ್ಯದ ಉತ್ತರಕಾಶಿಯ ಸೂರ್ಯಶಿಖರದಲ್ಲಿ ಮಕ್ಕಳ ಚಾರಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕೇರಳ, ಗುಜರಾತ್, ತಮಿಳುನಾಡು ರಾಜ್ಯಗಳ ಯುವಪಡೆ ಕಳೆದ ಮೇ 11 ರಿಂದ 24 ರವರೆಗೆ ಸೂರ್ಯ ಶಿಖರದಲ್ಲಿ ಚಾರಣ ಹಮ್ಮಿಕೊಂಡಿತ್ತು. ಇವರಿಗೆ ಸಾಹಸಿಗ ಅಂಜಲಿ ವಿ. ಭಟ್, ಉಪನ್ಯಾಸಕ ಅನಿಲ್ಕುಮಾರ್ ಮಾರ್ಗದರ್ಶನ ನೀಡಿದರು. ಬರೋಡಾ, ಬೆಂಗಳೂರು, ಸೇಲಂ, ಚೆನ್ನೈ, ಕೊಚ್ಚಿನ್, ಮೈಸೂರಿನ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಇದೇ ವೇಳೆ ದೆಹಲಿಯ ಅಕ್ಷರಧಾಮ, ಅಲಕನಂದ, ಋಷಿಕೇಶದ ಗಂಗಾನದಿ, ಗಂಗೋತ್ರಿ ಮತ್ತು ಗಂಗಾನಾಣಿಗೆ ಭೇಟಿ ನೀಡಿದರು. ಸೂರ್ಯಶಿಖರದಲ್ಲಿ ಮಕ್ಕಳ ಶೃಂಗಸಭೆ ನಡೆಸಿ ಅನುಭವ ಹಂಚಿಕೊಳ್ಳಲಾಯಿತು.
ತಂಡದಲ್ಲಿ ಸಂಜಯ್ ಶ್ರೀನಿವಾಸ್, ಅಖಿಲೇಶ್, ತನೂಜ್, ನಾಗರಾಜನ್ (ತಮಿಳುನಾಡು), ಸೂರ್ಯ, ಆದಿತ್ಯ ರಾವ್, ಈಶ್ವರ್, ಯಶ್ರಾಜ್ (ಕೇರಳ), ಅದ್ವೈತ ಮಧುಸೂದನ್, ಎಸ್. ಆದಿತ್ಯ, ಶಿವಜ್ಞಾನಂ, ಆಕಾಶ್, ವಿನೋದ್ಕುಮಾರ್, ಕನಕಜೈನ್, ಡಾ. ಗೀತಾ ನಾಗರಾಜ್, ತುಳಸಿ, ವರ್ಷ, ಅಕ್ಷರ, ಅನಿಲ್ಕುಮಾರ್, ರಿಯಾ ಸೋಲಂಕಿ, ಅಂಜಲಿ ಭಟ್, ಚಂದ್ರಿಕಾ ರಘು, ಅಮೂಲ್ಯ, ಬಾಲಸುಬ್ರಹ್ಮಣ್ಯಂ, ಕೆ.ಎಸ್. ಶ್ರೇಯಾ, ಪ್ರಣತಿ, ಚೇತನ ಸೀರ್ವಿ, ಪಿ. ಆದಿತ್ಯ, ಎಂ.ಎಸ್. ರಘು, ಹೇಮಂತ, ಆಕಾಶ್, ಲಿಖಿತ, ಅನಿರುದ್ಧ ಗಿರಿಮಾಜಿ, ಕೆ.ಎಂ. ಕಾರ್ತಿಕ, ಸಾಯಿ ವರುಣ, ಎ. ಅನಿಲ್ಕುಮಾರ್, ಡಿ.ಎಸ್.ಡಿ. ಸೋಲಂಕಿ ಭಾಗವಹಿಸಿದ್ದರು.