ಕೈಲಾಸಪುರಂನಲ್ಲಿ ಶಾರ್ಟ್ ಸರ್ಕ್ಯೂಟ್: ಮನೆ ಭಸ್ಮ
ಮೈಸೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆ ಸುಟ್ಟು ಭಸ್ಮವಾಗಿರುವ ಘಟನೆ ಇಲ್ಲಿನ ಕೈಲಾಸಪುರಂನಲ್ಲಿ ನಡೆದಿದೆ. ಕೈಲಾಸಪುರಂ 5ನೇ ಕ್ರಾಸ್ ನಿವಾಸಿ ಗಿರಿಜಮ್ಮ ಎಂಬವರಿಗೆ ಈ ಮನೆ ಸೇರಿದೆ. ಗಿರಿಜಮ್ಮ ಅವರು ಮನೆಯಲ್ಲಿ ಪೂಜೆ ಮುಗಿಸಿ ದೇವಸ್ಥಾನಕ್ಕೆ ಹೊರಡು ಸಿದ್ಧರಾಗಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಇದರಿಂದಾಗಿ ಮನೆಯಲ್ಲಿನ ಬಟ್ಟೆ, ಪೀಠೋಪಕರಣ, ಟಿವಿ ಬೆಂಕಿಗೆ ಆಹುತಿಯಾಗಿದೆ. ಸುಮಾರು 1.50 ಲಕ್ಷ ಮೌಲ್ಯದ ವಸ್ತು ಬೆಂಕಿಗೆ ಆಹುತಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಬನ್ನಿಮಂಟಪ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ, ಅಕ್ಕಪಕ್ಕದ ಮನೆಗಳಿಗೆ ವ್ಯಾಪಿಸಿದಂತೆ ನಿಯಂತ್ರಿಸಿದರು. ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.