ಗ್ರಾಮೀಣ ಮಹಿಳೆಯರಿಗೆ ವೃತ್ತಿ ಶಿಕ್ಷಣ ಮುಖ್ಯ: ರಮೇಶ್
ಕ.ಪ್ರ.ವಾರ್ತೆ ರಾವಂದೂರು ಮೇ 30
ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ವೃತ್ತಿಶಿಕ್ಷಣ ಬಹಳ ಪ್ರಮುಖವಾಗಿದ್ದು, ಸ್ವಾವಲಂಬಿ ಜೀವನ ಸಾಗಿಸಲು ಮಹಿಳೆಯರು ಮುಂದಾಗಬೇಕು ಎಂದು ಕಾರ್ಯಾಕ್ರಮಾಧಿಕಾರಿ ಎ.ಪಿ. ರಮೇಶ್ ಹೇಳಿದರು.
ತಾಲೂಕಿನ ಕಣಗಾಲು ಗ್ರಾಮದಲ್ಲಿ ಜೆಎಸ್ಎಸ್ ಜನಶಿಕ್ಷಣ ಸಂಸ್ಥೆ ವತಿಯಿಂದ ಹೊಲಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕೇವಲ ವಿದ್ಯಾವಂತ ಮಹಿಳೆರಯಷ್ಟೆ ಅಲ್ಲದೆ, ಅನಕ್ಷರಸ್ಥ ಮಹಿಳೆಯರೂ ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿ ಜೀವನ ಸಾಗಿಸಲು ಮುಂದಾಗಬೇಕು ಎಂದು ತಿಳಿಸಿದರು.
ಗ್ರಾಪಂ ಸದಸ್ಯೆ ನಾಗರತ್ನ ಮಾತನಾಡಿ, ಗ್ರಾಮೀಣ ಮಹಿಳೆಯರು ದೂರದ ಊರುಗಳಿಗೆ ಹೋಗಿ ವೃತ್ತಿಶಿಕ್ಷಣ ಪಡೆದುಕೊಳ್ಳುಬೇಕಾಗಿತ್ತು. ಆದರೆ, ಜೆಎಸ್ಎಸ್ ವೃತ್ತಿಶಿಕ್ಷಣ ಸಂಸ್ಥೆ ಗ್ರಾಮೀಣ ಪ್ರದೇಶಕ್ಕೆ ಅಗಮಿಸಿ ತರಬೇತಿ ನೀಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ವೃತ್ತಿ ಶಿಕ್ಷಣ ತರಬೇತುದಾರರಾದ ಸೌಮ್ಯ, ಅಂಗನವಾಡಿ ಶಿಕ್ಷಕಿ ನೇತ್ರಾವತಿ, ತಾ. ಸಂಯೋಜಕ ಮುಕುಂದ ಇದ್ದರು.