ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪುಷ್ಪಾಗೆ ಗೌರವ ಡಾಕ್ಟರೇಟ್

Rashmi Kasaragodu
Updated On : 30 May 2013, 11:55 am

ಮೈಸೂರು: ದಿ ಬೈಬಲ್ ಯೂನಿವರ್ಸಿಟಿ ಆಫ್ ಹೋಲಿ ಸ್ಪಿರಿಟ್, ನ್ಯೂ ಜೆರುಸಲೇಂ ಆ್ಯಂಡ್ ಬೆಥ್ಲಹೆಮ್, ದಿ ಗ್ಲೋಬಲ್ ಯೂನಿವರ್ಸಿಟಿ ಆಫ್ ಯೂನಿಕ್ ಪ್ರೊಫೆನಲಿಸಂನ ಗೌರವ ಡಾಕ್ಟರೇಟ್ಗೆ ಮೈಸೂರಿನ ಪುಷ್ಪಾ ಶಂಭುಕುಮಾರ್ ಭಾಜನರಾಗಿದ್ದಾರೆ. ಪುಷ್ಪಾ ಶಂಭುಕುಮಾರ್ ಅವರ ಸಮಾಜ ಸೇವೆ, ರಾಜಕೀಯ ಸೇವೆ ಮತ್ತು ನಗರದ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸೇರಿ ಮಾಡಿದ ಸಮಾಜ ಸೇವೆ ಪರಿಗಣಿಸಿ ಈ ಗೌರವ ನೀಡಲಾಗಿದೆ.
ದ. ಕೊರಿಯಾಕ್ಕೆ ಪ್ರಯಾಣ
ಮೈಸೂರು: ದಕ್ಷಿಣ ಕೊರಿಯಾದಲ್ಲಿ ಜೂ. 1ರಿಂದ 5 ರವರೆಗೆ ನಡೆಯುವ 20ನೇ ವಿಶ್ವ ಕಿವಿ, ಮೂಗು, ಗಂಟಲು ತಜ್ಞರ ಸಮ್ಮೇಳನದಲ್ಲಿ ಭಾಗವಹಿಸಲು ಜೆಎಸ್ಎಸ್ ಆಸ್ಪತ್ರೆಯ ಡಾ.ಎಂ.ಬಿ. ಭಾರತಿ ತೆರಳುತ್ತಿದ್ದು, ಕಿವುಡತನ ಮತ್ತು ಅದರ ಚಿಕಿತ್ಸೆ ಹಾಗೂ ಶಿರ ಮತ್ತು ಕುತ್ತಿಗೆ ನರದ ಕ್ಯಾನ್ಸರ್ ಬಗ್ಗೆ ವಿಚಾರ ಮಂಡಿಸುವರು.
ವಿಶ್ವಕರ್ಮ ಮುಖಂಡರ ಸಭೆ
ಮೈಸೂರು: ಬೆಂಗಳೂರಿನ ಮಲ್ಲೇಶ್ವರಂ 8ನೇ ಮುಖ್ಯರಸ್ತೆಯ ರಿಜಾಯ್ಸ್ ಹೊಟೇಲ್ನಲ್ಲಿ ಜೂ. 2ರಂದು ವಿಶ್ವಕರ್ಮ ಸಮಾಜದ ಮುಖಂಡರ ಸಭೆ ಆಯೋಜಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ವಿಶ್ವಕರ್ಮ ಜನಾಂಗದ ಮುಖಂಡರಿಗೆ ಕೃತಜ್ಞತಾ ಸಭೆ ಏರ್ಪಡಿಸಲಾಗಿದೆ. ಸಭೆಯಲ್ಲಿ ವಿಶ್ವಕರ್ಮ ಸಮಾಜಕ್ಕೆ ಪ್ರತ್ಯೇಕ ನಿಗಮ, ಸೆ. 17ರಂದು ನಡೆಯುವ ವಿಶ್ವಕರ್ಮ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲು ಮತ್ತು 5ನೇ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ವಿಶ್ವಕರ್ಮ ಯುವ ಸೇನೆ ರಾಜ್ಯಾಧ್ಯಕ್ಷ ಎ. ಶಿವಶಂಕರ ಮತ್ತು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಚಂದ್ರು ವಿಶ್ವಕರ್ಮ ತಿಳಿಸಿದ್ದಾರೆ.
ನೋಟ್ ಪುಸ್ತಕ ವಿತರಣೆ
ಮೈಸೂರು: ಆಟೋ ರಿಕ್ಷಾ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಮೈಸೂರು ಆದರ್ಶ ಆಟೋರಿಕ್ಷಾ ಚಾಲಕರ ವೇದಿಕೆಯಿಂದ ನೋಟ್ ಪುಸ್ತಕಗಳ ಉಚಿತ ವಿತರಣಾ ಸಮಾರಂಭವನ್ನು ಜೂ. 1ರ ಬೆಳಗ್ಗೆ 10.30ಕ್ಕೆ ಆಯೋಜಿಸಿದೆ. ವೇದಿಕೆ ಸದಸ್ಯರು ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿಕೊಂಡು ಒಂದು ದಿನ ಮುಂಚೆ ನೋಟ್ ಪುಸ್ತಕದ ಟೋಕನ್ ಪಡೆದುಕೊಳ್ಳಬೇಕು ಎಂದು ವೇದಿಕೆ ಅಧ್ಯಕ್ಷ ಸರದಾರ್ ಅಹ್ಮದ್ ಮತ್ತು ಪ್ರಧಾನ ಕಾರ್ಯದರ್ಶಿ ನಾಗರಾಜ್ ತಿಳಿಸಿದ್ದಾರೆ.
ಕಥೆ ಕೇಳೋಣ ಬನ್ನಿ
ಮೈಸೂರು: ಸುರುಚಿ ರಂಗಮನೆಯು ಜೂ. 1ರ ಸಂಜೆ 5.30ಕ್ಕೆ ಚಿತ್ರಭಾನು ರಸ್ತೆಯ ಸುರುಚಿ ರಂಗಮನೆಯಲ್ಲಿ ಕಥೆ ಕೇಳೋಣ ಬನ್ನಿ ಕಾರ್ಯಕ್ರಮ ಏರ್ಪಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಡಿ. ನಾಗೇಂದ್ರಪ್ಪ ಕಥೆ ಹೇಳಿಕೊಡುವರು. ಹೆಚ್ಚಿನ ಮಾಹಿತಿಗೆ ಮೊ. 2541795 ಸಂಪರ್ಕಿಸಬಹುದು.
ವಸ್ತುಪ್ರದರ್ಶನ
ಮೈಸೂರು: ಜೆಎಸ್ಎಸ್ ಅಂಗವಿಕಲರ ಪಾಲಿಟೆಕ್ನಿಕ್ನಲ್ಲಿ ಮೇ 31 ಮತ್ತು ಜೂ.1 ರಂದು ಆಭರಣ ವಿನ್ಯಾಸ ಮತ್ತು ತಾಂತ್ರಿಕ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿರುವ ಚಿನ್ನಾಭರಣಗಳ ಮಾದರಿಗಳ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಈ ವಸ್ತುಪ್ರದರ್ಶನದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳು ತಯಾರಿಸಿದ ಚಿನ್ನಾಭರಣಗಳ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. ಈ ಪ್ರದರ್ಶನವು ಬೆಳಗ್ಗೆ 10ರಿಂದ ಸಂಜೆ 4.30 ರವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ತೆರೆದಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಾಂಶುಪಾಲರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement