ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾಶಿ ರಾಶಿ ಕಸ...

Rashmi Kasaragodu
Updated On : 30 May 2013, 11:38 am

ಕ.ಪ್ರ.ವಾರ್ತೆ   ಮೈಸೂರು   ಮೇ 30
ಟಿ.ಕೆ. ಬಡಾವಣೆ ರಸ್ತೆಯಲ್ಲಿನ ಕಂಟೈನರ್ ಕಾಣೆಯಾದ ಬಳಿಕ ಪಾದಚಾರಿ ರಸ್ತೆಯೆ ಕಸದ ಗುಂಡಿಯಾಗಿದೆ ಎಂದು ತುಳಸಿ ಪರಿಸರ ನೈರ್ಮಲ್ಯ ಸಂಸ್ಥೆಯ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಈ ರಸ್ತೆಯ ಆರ್ಟಿಟಿಸಿ ಕಾಂಪೌಂಡ್ ಬದಿ ರಸ್ತೆಯಲ್ಲಿನ ಕಂಟೈನರ್ ಕಣ್ಮರೆಯಾದ ಪರಿಣಾಮ ಈ ರಸ್ತೆಯ ಸುಮಾರು 100 ಅಡಿ ಉದ್ದಕ್ಕೆ ಪಾದಚಾರಿ ರಸ್ತೆ ಪೂರ್ಣ ಕಸ ಹಾಗೂ ಘನತ್ಯಾಜ್ಯ ವಸ್ತುವಿನಿಂದ ಆಕ್ರಮಿಸಿಕೊಂಡು ದುರ್ವಾಸನೆ ಬೀರುತ್ತಿದೆ ಎಂದು ದೂರಿದ್ದಾರೆ.
ಈ ರಸ್ತೆಯಲ್ಲಿ ಮಾಜಿ ಶಾಸಕರು, ಈಗಿನ ಪುರಪಿತೃಗಳು ಮತ್ತು ಮಾಜಿ ಮೇಯರ್ಗಳು ಇದ್ದಾರೆ. ಆದರೂ ಸಮಸ್ಯೆ ಅವರ ಕಣ್ಣಿಗೆ ಬೀಳದಿರುವುದು ಆಶ್ಚರ್ಯ. ಈ ಸಂಬಂಧ ಹಲವು ಬಾರಿ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನ ಇಲ್ಲ ಎಂದು ತಿಳಿಸಿದ್ದಾರೆ.
ಸಿದ್ದಪ್ಪಾಜಿ ದೇವಸ್ಥಾನದ ಎದುರು ಮಾತ್ರ ಸುಮಾರು 100 ಅಡಿ ಉದ್ದಕ್ಕೆ ಉದ್ದೇಶಪೂರ್ವಕವಾಗಿ ಫುಟ್ಪಾತ್ಗೆ ಟೈಲ್ಸ್ ಹಾಕದೆ ಇರುವುದರಿಂದ ಅದು ಕಸದ ಗುಂಡಿಯಾಗಿ ನಾಯಿ, ಹಂದಿ, ಹಸು ಮತ್ತು ಕುದುರೆಯ ತಾಣವಾಗಿದೆ. ಡೆಂಘೀ ಜ್ವರ ಕೇವಲ ನೀರಿನಿಂದ ಮಾತ್ರವಲ್ಲದೆ ಇತರ ಕಾರಣಗಳಿಗಾಗಿಯೂ ಬರುತ್ತದೆ. ಆದ್ದರಿಂದ ಪಾಲಿಕೆ ಅಧಿಕಾರಿಗಳು ಸ್ವಚ್ಛತೆ ಮತ್ತು ಉತ್ತಮ ಆಡಳಿತ ನೀಡಬೇಕು ಎಂದು ಸಂಸ್ಥೆ ಪದಾಧಿಕಾರಿಗಳು ಬುಧವಾರ ಸಭೆ ನಡೆಸಿ ಮನವಿ ಮಾಡಿದ್ದಾರೆ.
ಸಂಸ್ಥೆಯ ಸಭೆಯಲ್ಲಿ ಅಧ್ಯಕ್ಷ ಎಸ್. ಶ್ರೀಧರ್, ಪ್ರಧಾನ ಕಾರ್ಯದರ್ಶಿ ಎಂ.ಎನ್. ಸತ್ಯನಂದವಿಟ್ಟು, ಸಹ ಕಾರ್ಯದರ್ಶಿ ಕಲಾವತಿ ರಾಮಮೂರ್ತಿ, ಸುರೇಂದ್ರ, ಸುಬ್ಬನರಸಿಂಹ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments