ಗೆಜ್ಜಗಳ್ಳಿಯಲ್ಲಿ ಶಾಲೆ ಆರಂಭ
ಮೈಸೂರು: ತಾಲೂಕಿನ ಗೆಜ್ಜಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವವು ಶುಕ್ರವಾರ ನಡೆಯಿತು. ಶಾಲೆಗೆ ಹೊಸದಾಗಿ ದಾಖಲಾದ ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅವರ ಪರವಾಗಿ 5, 6 ಮತ್ತು 7ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗ್ರಾಪಂ ಮಾಜಿ ಸದಸ್ಯ ಜಿ.ಎಂ. ಮಹೇಶ್ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿದರು. ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ. ಸಿದ್ದಲಿಂಗಸ್ವಾಮಿ ಬ್ಯಾಡ್ಜ್, ಸದಸ್ಯರು ಟೈ, ಬಸವಣ್ಣ ಅವರು ಬೆಲ್ಟ್ ವಿತರಿಸಿದರು. ಟಿವಿಎಸ್ ಸಂಸ್ಥೆ ವತಿಯಿಂದ ಲಲಿತಾಂಬ ಅವರು ಬಹುಮಾನ ನೀಡಿದರು. ಗ್ರಾಮದ ಮುಖಂಡ ಡಿ. ಮಹೇಶ್ ಅವರು ಬ್ಯಾಂಡ್ ಬಾರಿಸುವ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. ತಾಲೂಕು ಬೋರ್ಡ್ನ ಮಾಜಿ ಸದಸ್ಯ ಮಹದೇವಪ್ಪ ಸಿಹಿ ಹಂಚಿದರು. ಶಾಲೆಯ ವಿದ್ಯಾರ್ಥಿ ಜಿ.ಎನ್. ಚಂದ್ರಶೇಖರ್ ಅನಿಸಿಕೆ ವ್ಯಕ್ತಪಡಿಸಿದ. ಬಿಇಒ ರಾಮಾರಾಧ್ಯ ಕಾರ್ಯಕ್ರಮ ಉದ್ಘಾಟಿಸಿ, ಶಾಲಾ ವೃಂದ ಮತ್ತು ಸಮುದಾಯದ ಕಾರ್ಯದಕ್ಷತೆಯನ್ನು ಶ್ಲಾಘಿಸಿದರು. ಎಸ್ಡಿಎಂಸಿ ಅಧ್ಯಕ್ಷ ಜಿ. ನಟರಾಜು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಬಿಆರ್ಸಿ ದೇವರಾಜ್ ಇದ್ದರು. ಶಾಲೆಯ ಮುಖ್ಯಶಿಕ್ಷಕಿ ಜಿ.ವಿ. ನಾಗೇಶ್ ಸ್ವಾಗತಿಸಿದರು. ಸಹ ಶಿಕ್ಷಕಿ ಸಿ.ಎಸ್. ಮಮತಾ ವಂದಿಸಿದರು.
3ಕ್ಕೆ ವಿಶೇಷ ಉಪನ್ಯಾಸ
ಮೈಸೂರು: ಹಿರಿಯ ನಾಗರಿಕರ ಮಂಡಳಿಯು ಜೂ. 3ರ ಸಂಜೆ 5.30ಕ್ಕೆ ನೆಮ್ಮದಿಯ ಜೀವನಕ್ಕೆ ಒತ್ತಡ ನಿರ್ವಹಣೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಜಯಲಕ್ಷ್ಮೀಪುರಂನ ಹಿರಿಯನಾಗರಿಕರ ಮಂಡಳಿಯಲ್ಲಿ ಏರ್ಪಡಿಸಿದೆ. ಮಹಾಜನ ಕಾಲೇಜಿನ ಪ್ರಾಧ್ಯಾಪಕ ಎನ್.ಜಿ. ಶಿವಶಂಕರ್ ಉಪನ್ಯಾಸ ನೀಡುವರು. ಮಂಡಳಿ ಅಧ್ಯಕ್ಷ ಡಾ. ಎಚ್.ಎಂ. ನಾಗರಾಜು ಅಧ್ಯಕ್ಷತೆ ವಹಿಸುವರು.