ಚಕ್ಕೂರಲ್ಲಿ ಮಗುವಿಗೆ ಡೆಂಘೀ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಮೇ 31
ತಾಲೂಕಿನ ಚಕ್ಕೂರು ಗ್ರಾಮದಲ್ಲಿ ಮಗುವಿಗೆ ಡೆಂಘೀ ಜ್ವರ ಇರುವುದು ದೃಢಪಟ್ಟಿದೆ.
ತಾಲೂಕಿನ ಕೊಲ್ಲೇಗೌಡನಹಳ್ಳಿ ಗ್ರಾಮದ ವೇಣುಗೋಪಾಲ್ ಅವರ ಪತ್ನಿ ಅನುರಾದ ಹೆರಿಗೆಗಾಗಿ ಚಕ್ಕೂರು ಗ್ರಾಮದ ತಂದೆಯ ಮನೆಯಲ್ಲಿದ್ದು, ಈಕೆಯ ಆರು ತಿಂಗಳ ಗಂಡು ಮಗುವಿಗೆ ಡೆಂಘೀ ಜ್ವರ ಕಾಣಿಸಿಕೊಂಡಿದ್ದು, ಮೈಸೂರಿನ ವೈದ್ಯ ಶೆಣೈ ಎಂಬವವರು ಮೇ 26 ರಂದು ಮಗುವಿಗೆ ಜ್ವರ ಇರುವುದನ್ನು ಖಚಿತಪಡಿಸಿದ್ದಾರೆ.
ಜೆಎಸ್ಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗುವನ್ನು ನಂತರ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಷಯ ತಿಳಿದ ಚಕ್ಕೂರು ಗ್ರಾಮದ ವೈದ್ಯರಾದ ರಾಜು ಗ್ರಾಮದಲ್ಲಿ ಪ್ರತಿ ಮನೆಗಳಿಗೆ ತೆರಳಿ ತಪಾಸಣೆ ಕೈಗೊಂಡಿದ್ದು, ಬೇರೆ ಯಾವುದೇ ಪ್ರಕರಣವು ಇರುವ ಬಗ್ಗೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಹಸೀಲ್ದಾರ್ ಕೃಷ್ಣ ಶುಕ್ರವಾರ ಮೈಸೂರಿನ ಅಪೋಲೋ ಆಸ್ಪತ್ರೆಗೆ ತೆರೆಳಿ ಮಗುವಿನ ಆರೋಗ್ಯ ವಿಚಾರಿಸಿದರು.