ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಿದ್ದೇಶ್ವರಪ್ಪ ನೇಮಕ

Rashmi Kasaragodu
Updated On : 1 Jun 2013, 12:08 pm

ಮೈಸೂರು: ಅಖಿಲ ಭಾರತ ಕುರುಬರ ಸಮಾಜ ಮಹಾಸಂಘದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮೈಸೂರಿನ ಎಂ. ಎಸ್. ಸಿದ್ದೇಶ್ವರಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ರಾಷ್ಟ್ರೀಯ ಅಧ್ಯಕ್ಷ ಜಿ.ಎಸ್. ಬನ್ಸೋಡೆ ತಿಳಿಸಿದ್ದಾರೆ.
ಒಳಾಂಗಣ ವಸ್ತು ಪ್ರದರ್ಶನ
ಮೈಸೂರು: ಮನೆಯ ಒಳಾಂಗಣವನ್ನು ಯೂರೋಪಿಯನ್ ಮಾದರಿಯಲ್ಲಿ ಶೃಂಗರಿಸುವ ಕೇರಳಿಯನ್ ವಿಲೇಜ್ ಶಾಪ್ ನಗರದ ರಿಗಾಲಿಸ್ ಹೊಟೇಲ್ನಲ್ಲಿ ತನ್ನ ವಸ್ತು ಪ್ರದರ್ಶನ ತೆರೆದಿದೆ. ಜೂ. 1 ಮತ್ತು 2 ರಂದು ಈ ವಸ್ತು ಪ್ರದರ್ಶನ ನಡೆಯಲಿದೆ. ಟೇಬಲ್ ಕವರ್, ಟೇಬಲ್ ಮ್ಯಾಟ್, ಟವೆಲ್ಗಳು ಸಹ ಯೂರೋಪಿಯನ್ ಮಾದರಿಯಲ್ಲಿದೆ. ಹೆಚ್ಚಿನ ಮಾಹಿತಿಗೆ ವಲ್ಸ್ರಾಜ್ ಅವರ ಮೊ. 9847301650 ಸಂಪರ್ಕಿಸಬಹುದು.
ವಿದ್ಯಾರ್ಥಿಗಳಿಗೆ ಧನಸಹಾಯ
ಮೈಸೂರು: ನಗರದಲ್ಲಿ ಒಂದರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಕಡು ಬಡವರಾದ ಬ್ರಾಹ್ಮಣ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ 2013- 14ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ವಿಜಯನಗರ 3ನೇ ಹಂತದಲ್ಲಿರುವ ನಂಜನಗೂಡು ಶಾರದಮ್ಮ ಸ್ಮಾರಕ ಧರ್ಮಸಂಸ್ಥೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಪಡೆಯಲು ಮತ್ತು ಸಲ್ಲಿಸಲು ಜೂ. 10 ಕಡೆ ದಿನ. ಆಸಕ್ತರು ನಿಗದಿತ ಅರ್ಜಿ ನಮೂನೆಗಳನ್ನು ಮ್ಯಾನೇಜಿಂಗ್ ಟ್ರಸ್ಟಿ, ನಂಜನಗೂಡು ಶಾರದಮ್ಮ ಸ್ಮಾರಕ ಧರ್ಮ ಸಂಸ್ಥೆ, ನಂ. 4944, ಶಾರದಾ, 8ನೇ ಮುಖ್ಯರಸ್ತೆ, ವಿಜಯನಗರ 2ನೇ ಹಂತ, ಮೈಸೂರು-570017. ಇವರಿಗೆ ಪೋಸ್ಟ್ ಕಾರ್ಡ್ವೊಂದರಲ್ಲಿ ಕೋರಿಕೆ ಸಲ್ಲಿಸಿ ಪಡೆಯುವಂತೆ ಮ್ಯಾನೇಜಿಂಗ್ ಟ್ರಸ್ಟಿ ಸಿ.ವಿ. ಕೇಶವಮೂರ್ತಿ ತಿಳಿಸಿದ್ದಾರೆ.
ವಸತಿ ನಿಲಯಕ್ಕೆ ಅರ್ಜಿ ಆಹ್ವಾನ
ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ವಸತಿ ನಿಲಯಕ್ಕೆ 2013- 14ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ. ಪರೀಕ್ಷೆಯಲ್ಲಿ ತೇರ್ಗಡೆಯಾದ ಬಗ್ಗೆ ಅಂಕ ಪಟ್ಟಿ ಹಾಗೂ ಅರ್ಜಿಯನ್ನು ನಿಗದಿತ ಶುಲ್ಕದೊಂದಿಗೆ ಜುಲೈ 1 ರೊಳಗೆ ಸಲ್ಲಿಸಬೇಕು. ವಿವರಗಳಿಗೆ ದೂ. 2482944 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement