ಕನ್ನಡಾಭಿಮಾನ ಬೆಳೆಸಿಕೊಳ್ಳಿ: ಮಲ್ಲರಾಜು
ಕ.ಪ್ರ.ವಾರ್ತೆ ಸಾಲಿಗ್ರಾಮ ನ. 1
ಕನ್ನಡಾಭಿಮಾನವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಭಾಷಾ ಪ್ರೇಮ ಮೆರೆಯಬೇಕು ಎಂದು ಪ್ರಾಂಶುಪಾಲ ಮಲ್ಲರಾಜು ಹೇಳಿದರು.
ಸಮೀಪದ ಹರದನಹಳ್ಳಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕನ್ನಡ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಆ ಮೂಲಕ ನಿತ್ಯ ಕನ್ನಡವನ್ನು ಅಭ್ಯಾಸ ಮಾಡಬೇಕು ಹಾಗೂ ಕನ್ನಡ ಬಾರದವರಿಗೆ ಕನ್ನಡ ಭಾಷೆ ಕಲಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಎಚ್.ಜಿ. ರಮೇಶ್, ಮುಖ್ಯ ಶಿಕ್ಷಕ ಕೆ. ಜಯರಾಮೇಗೌಡ, ಉಪನ್ಯಾಸಕರಾದ ವರದಯ್ಯ, ಹೇಮಯ್ಯ, ರವಿಶಂಕರ್, ಸುರೇಂದ್ರ, ಶಿವಸ್ವಾಮಿ, ಸುರುಚಿ, ಭಾಗ್ಯಜ್ಯೋತಿ, ಶಿಕ್ಷಕರಾದ ಶಂಕರೇಗೌಡ, ಮಂಜುನಾಥ, ಗಂಗಾಧರಪ್ಪ, ರೂಪ, ರಾಜಶೇಖರ್ ಮಠಪತಿ, ಹುಸೇನ್ ಭಾಷಾ ಹಾಗೂ ವಿದ್ಯಾರ್ಥಿಗಳು ಇದ್ದರು.