ಕಾಲುಬಾಯಿ ಜ್ವರಕ್ಕೆ ನಾಲ್ಕು ಹಸು ಬಲಿ
ಕೆ.ಆರ್. ನಗರ: ತಾಲೂಕಿನ ಹೆಬ್ಬಾಳು ಕೊಪ್ಪಲು ಗ್ರಾಮದಲ್ಲಿ ಕಾಲು ಬಾಯಿ ಜ್ವರಕ್ಕೆ ತುತ್ತಾಗಿ ನಾಲ್ಕು ಹಸುಗಳು ಮೃತಪಟ್ಟಿರುವ ಘಟನೆ ನಡೆದಿದೆ. ಇಲ್ಲಿನ ಆಸ್ಪತ್ರೆ ಬ್ಲಾಕ್ನ ರಂಗೇಗೌಡರ ಮಗ ನಾಗರಾಜು ಎಂಬವರಿಗೆ ಸೇರಿದ ಮೂರು ಹಸುಗಳು ಮತ್ತು ಹೆಬ್ಬಾಳು ಕೊಪ್ಪಲಿನ ಸುಬ್ಬೇಗೌಡರ ನಾಗರಾಜು ಅವರ ಒಂದು ಹಸು ರೋಗಕ್ಕೆ ತುತ್ತಾಗಿ ಮೃತಪಟ್ಟಿವೆ. ರಾಸುಗಳು ಮೃತಪಟ್ಟಿರುವುದರಿಂದ ಮಾಲೀಕರಿಗೆ ತೊಂದರೆಯಾಗಿದ್ದು ಕೂಡಲೆ ಪಶು ಇಲಾಖೆ ಅಧಿಕಾರಿಗಳು ಸರ್ಕಾರದಿಂದ ಪರಿಹಾರ ಕೊಡಿಸಬೇಕು ಎಂದು ಮುಖಂಡ ಹೆಬ್ಬಾಳು ಭೀಮೇಗೌಡ ಒತ್ತಾಯಿಸಿದ್ದಾರೆ.