ತಡವಾಗಿ ಬಂದ ಶಾಸಕರು
ಕೆ.ಆರ್. ನಗರ: ತಡವಾಗಿ ಬಂದ ಶಾಸಕರು, ಅಧಿಕಾರಿಗಳ ನಿರ್ಲಕ್ಷ್ಯ ಬಿಸಿಲಲ್ಲಿ ಬಸವಳಿದ ಮಕ್ಕಳು, ಸ್ತಬ್ದ ಚಿತ್ರಗಳ ಕೊರತೆ ಇವು ಪಟ್ಟಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳು.ಮೆರವಣಿಗೆ ಮುಗಿದು ಸಭಾ ಕಾರ್ಯಕ್ರಮ ಆರಂಭವಾದರೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಸಾ.ರಾ. ಮಹೇಶ್ ಅರ್ಧಗಂಟೆ ತಡವಾಗಿ ಆಗಮಿಸಿದರು. ಅಲ್ಲಿಯವರೆಗೂ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾದು ಕುಳಿತಿದ್ದರು. ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಜಿಪಂ ಸದಸ್ಯ ಸಿ.ಜೆ. ದ್ವಾರಕೀಶ, ತಾಪಂ ಸದಸ್ಯರಾದ ನಾಗಣ್ಣ, ಶಶಿಕಲಾ ರಮೇಶ್ ಅವರನ್ನು ಹೊರತುಪಡಿಸಿ ಬಹುತೇಕ ಇಲಾಖೆಯ ಅಧಿಕಾರಿಗಳು ಭಾಗವಹಿಸಿರಲಿಲ್ಲ.