ಬಸ್ನಲ್ಲಿಯೇ ರಾಜ್ಯೋತ್ಸವ
ರಾವಂದೂರು: ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೆ.ಆರ್. ನಗರ ಘಟಕಕ್ಕೆ ಸೇರಿದ ಮಾರ್ಗ ಸಂಖ್ಯೆ 27ರ ಬಸ್ನಲ್ಲಿಯೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಬಸ್ ಅನ್ನು ಹೂಗಳಿಂದ ಅಲಂಕರಿಸಿ ಬಸ್ ಒಳಗೆ ಕನ್ನಡಾಂಬೆ ದೇವಿಯ ಫೋಟೋ ಇಟ್ಟು ಪೂಜೆ ಸಲ್ಲಿಸಲಾಯಿತು. ಬಸ್ ಏರಿದ ಪ್ರಯಾಣಿಕರಿಗೆ ಸಿಹಿ ವಿತರಿಸುವುದರ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ನಿರ್ವಾಹಕ ಸೋಮಣ್ಣ, ನಿರ್ವಾಹಕಿ ರೂಪ, ಸಂಚಾರಿ ನಿಯಂತ್ರಕ ಲಕ್ಕಯ್ಯ ಇದ್ದರು.