ವೇಶ್ಯಾವಾಟಿಕೆ: ಮೂವರ ಸೆರೆ
ಮೈಸೂರು: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, ನಾಲ್ಕು ಮಂದಿ ಯುವತಿಯರನ್ನು ರಕ್ಷಿಸಿರುವ ಘಟನೆ ಗುರುವಾರ ಸಂಜೆ ನಡೆದಿದೆ.ಹೆಬ್ಬಾಳು 2ನೇ ಹಂತದಲ್ಲಿರುವ ಓಂ ಸಾಯಿ ಎನ್ಕ್ಲೇವ್ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಉತ್ತರ ಕನ್ನಡ ಜಿಲ್ಲೆಯ ಶಂಕರ್ (27), ಚಿಕ್ಕಮಗಳೂರು ಜಿಲ್ಲೆಯ ಕುಮಾರ (22) ಮತ್ತು ಮೈಸೂರಿನ ಅವಿನಾಶ್ (28) ಬಂಧಿತ ಆರೋಪಿಗಳು.
ರಕ್ಷಿಸಲ್ಪಟ್ಟ ನಾಲ್ವರು ಯುವತಿಯ ಪೈಕಿ ಇಬ್ಬರು ಪಶ್ಚಿಮ ಬಂಗಾಳ, ಒಬ್ಬರು ಅಸ್ಸಾಂ ಹಾಗೂ ಮತ್ತೊಬ್ಬರು ಬೆಂಗಳೂರಿನವರು. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.