ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕನ್ನಡ ನಾಡು, ನುಡಿ... ಗಾಯನ ಮೋಡಿ

Mainashree
Updated On : 3 Nov 2013, 11:32 am

ಹುಣಸೂರು: ಮೈಸೂರು ವಿವಿಯ ಸ್ನಾತಕೋತ್ತರ ವಿಭಾಗಗಳಲ್ಲಿ ಓದುತ್ತಿರುವ ವಿವಿಧ ವಿಷಯಗಳ ವಿದ್ಯಾರ್ಥಿಗಳೆಲ್ಲ ಸೇರಿ ಕನ್ನಡ ನಾಡು, ನುಡಿ ಎಂಬ ತಂಡ ಕಟ್ಟಿಕೊಂಡಿದ್ದು, ಕನ್ನಡ ಗೀತೆಗಳನ್ನು ಹಾಡಿ ಮೋಡಿ ಮಾಡುತ್ತಿದ್ದಾರೆ.
ಇವರೆ ರಚಿಸಿದ ಹಾಡಿಗೆ, ರಾಗ ಸಂಯೋಜನೆ ಮಾಡಿ ಸುಸಜ್ಜಿತ ವೇದಿಕೆ ಮೇಲೆ ಸುಶ್ರಾವ್ಯ ಹಾಡಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಎಲ್ಲಾ ಕನ್ನಡ ಹಾಡುಗಳಲ್ಲಿ ಎಲ್ಲೂ ಅಶ್ಲೀಲತೆ ಇರಲಿಲ್ಲ, ಸೃಜನಾತ್ಮಕ, ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿಬಿಂಬಿಸುವ ರಚನೆಯ ಹಾಡುಗಳಾಗಿದ್ದರಿಂದಲೇ ಎಲ್ಲರ ಗಮನ ಸೆಳೆದವು.
ಹುಣಸೂರು ಪಟ್ಟಣದ ಟ್ಯಾಲೆಂಟ್ ಸಂಸ್ಥೆಯ ರಂಗ ಮಂಟಪದಲ್ಲಿ ನಾವು... ನಾಮಬಲದ ಎಂಟು ಮಂದಿ ಯುವ ಪಡೆ ನೀಡಿದ ಸಂಗೀತ ನಾದಮಯವು ಸಂಗೀತ ಲೋಕವನ್ನೇ ಸೃಷ್ಟಿಸಿತು. ಇವರ ಅಮೋಘ, ಅರ್ಥಪೂರ್ಣ ಹಾಡುಗಳಿಗೆ ಸಂಗೀತಾಭಿಮಾನಿಗಳು ಸಾಕ್ಷಿಯಾಗಿದ್ದರು. ಸಮಾನಾಸಕ್ತರ ಯುವ ಪಡೆ ಸಂಗೀತದ ನಾದಮಯವನ್ನೇ ಇಡೀ ಆವರಣದಲ್ಲಿ ಹರಿದಾಡಿಸಿ, ಸಂಗೀತದ ಅಬ್ಬರದ ಅಲೆಯನ್ನೇ ಎಬ್ಬಿಸಿತು
ಅವರೇ ರಚಿಸಿಕೊಂಡಿರುವ ಹಾಡಿನಲ್ಲಿ ಬೆಂಗಳೂರು ಅವಾಂತರದ ಮೆಟ್ರೋ ಸಿಟಿ ನಗರ ಹಾಗೂ ಹಳ್ಳಿಯ ದರ್ಶನವಿರುವ ನಗರದೊಳಗೊಂದು ಊರು, ಕನ್ನಡ ನಾಡು, ನುಡಿ, ಸಂಸ್ಕೃತಿ ಪ್ರತಿಬಿಂಬಿಸುವ ನಮ್ಮೀ ನಾಡನು ನೋಡಾ.. ರೈಲಿನ ಜಂಜಾಟದ ಪ್ರಯಾಣ ಕುರಿತ ಟ್ರೈನ್ ಸಾಂಗ್, ನೀ ಇರದೆ ನಾ ಇರಲಾದೀತ.. ಎಂಬ ಪ್ರೇಮಗೀತೆ ಹಾಗೂ ದಾವ್‌ದ ಜಿಂಗ್ ಎಂಬ ಚೀನಿ ತತ್ವಜ್ಞಾನದ ಗೀತೆ... ಹೀಗೆ ಬಗೆ ಬಗೆಯ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವ ಹಾಡಿಗೆ ತಕ್ಕಂತೆ ಸಂಗೀತ ಇಡೀ ಕಾರ್ಯಕ್ರಮಕ್ಕೆ ಕಳೆಕಟ್ಟಿತ್ತು.
ಹುಣಸೂರಿನ ಪತ್ರಿಕೋದ್ಯಮ ವಿದ್ಯಾರ್ಥಿ ಅನುಷ್ ಎ. ಶೆಟ್ಟಿ(ತಬಲ), ಎಮಿಲ್ ಅಬ್ರಹಂ(ಕೀಬೋರ್ಡ್), ಶ್ರೀಕಂಠಸ್ವಾಮಿ(ಡ್ರಮ್ಮರ್), ಮೋಹನ್ ಪ್ರಗಥ್(ಗಿಟಾರ್), ಬಿ.ಕೆ. ಕಿರಣ್(ತಾಳ), ಸುಂದರೇಶ್ ಹಾಗೂ ಈತನ ಸಹೋದರಿ ಶಾಲೋಮ್ ಸನ್ನತಾ ಅವರ ಗಾಯನ, ತಂಡ ನಿರ್ವಹಿಸುವ ಆದರ್ಶ್ ಆರ್ಯ ಅವರ ಸಂಗೀತ ಸಮ್ಮಿಲನ ರೋಮಾಂಚನಗೊಳಿಸಿತು. ಟ್ಯಾಲೆಂಟ್ ಸಂಸ್ಥೆಯ ಮುಖ್ಯಸ್ಥ ನವೀನ್ ರೈ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ನೋಡಲು ಜನಸಾಗರ ಹರಿದು ಬಂದಿರುವುದು ಸಂತೋಷ ತಂದಿದೆ ಎಂದರು. ಮೈಸೂರಿನ ರಂಗಾಯಣದ ವನರಂಗದಲ್ಲಿ ನ.21 ಮತ್ತು 22ರಂದು ಸಂಜೆ 7ಕ್ಕೆ ಪ್ರದರ್ಶನವಿದೆ ಎಂದು ತಂಡದವರು ಪ್ರಕಟಿಸಿದರು.

ಧರ್ಮಾಪುರ ನಾರಾಯಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement