ಕನ್ನಡ ಪತ್ರಿಕೆಗಳ ಉಚಿತವಾಗಿ ವಿತರಣೆ
ಮೈಸೂರು:ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರು ಕನ್ನಡ ವೇದಿಕೆ ವತಿಯಿಂದ ನಗರದ ಕೆ.ಆರ್. ವೃತ್ತದಲ್ಲಿ ಉಚಿತವಾಗಿ ಕನ್ನಡ ದಿನಪತ್ರಿಕೆಗಳನ್ನು ಹಂಚಲಾಯಿತು.
ಪ್ರತಿಯೊಬ್ಬ ಕನ್ನಡಿಗನೂ ತಮಗೆ ಇಷ್ಟ ಬಂದ ಕನ್ನಡ ಪತ್ರಿಕೆಯನ್ನು ಕೊಂಡು ಓದುವಂತೆ ತಿಳಿಸಿ, ಸಾರ್ವಜನಿಕರು, ಅಂಗಡಿ, ಹೊಟೇಲ್ಗಳಿಗೆ ಪತ್ರಿಕೆಗಳನ್ನು ವಿತರಿಸಿದರು.
ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ನಗರ ಪಾಲಿಕೆ ಸದಸ್ಯ ಪ್ರಶಾಂತ್ಗೌಡ, ನಾಲಾಬೀದಿ ರವಿ, ಬ್ಯಾಂಕ್ ಪುಟ್ಟಸ್ವಾಮಿ, ಸುರೇಶ್ಬಾಬು, ಅಜಯ್ ಜೈನ್, ದೊರೆಸ್ವಾಮಿ, ಗೋಪಿ, ಗುರುಬಸಪ್ಪ, ಬಾಬು, ಅರವಿಂದ್, ವೆಂಕಟೇಶ್, ನಂಜುಂಡಿ ಶಿವರಾಜ್ ಇದ್ದರು.