ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಲಭೈರವೇಶ್ವರಸ್ವಾಮಿ ಉತ್ಸವ

Mainashree
Updated On : 3 Nov 2013, 11:32 am

ಹುಣಸೂರು: ತಾಲೂಕಿನ ಗಾವಡಗೆರೆಯ ಕಾಲಭೈರವೇಶ್ವರ ಸ್ವಾಮಿಯ 9ನೇ ವರ್ಷದ ದೀಪಾವಳಿ ಅಮಾವಾಸ್ಯೆಯ ವಿಶೇಷ ಉತ್ಸವ ಸಾವಿರಾರು ಆಸ್ತಿಕರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಭಾನುವಾರ ಬೆಳಗ್ಗೆ ಕಾಲಭೈರವೇಶ್ವರನಿಗೆ ಅಭಿಷೇಕ ಇನ್ನಿತರ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು. ನಂತರ ಗ್ರಾಮದ ನದಿತಟದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ 30ಕ್ಕೂ ಹೆಚ್ಚು ಕಳಶ ಹೊತ್ತ ಮಹಿಳೆಯರ ಸಂಭ್ರಮದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳಾದ ಕಂಸಾಳೆ ಕುಣಿತ, ಕುಣಿಗುಡ್ಡರ ಕುಣಿತ, ತಮಟೆ ವಾದ್ಯ, ಮಂಗಳ ವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಪ್ರಥಮ ಕಾರ್ತಿಕ ಮಾಸದ ಅಂಗವಾಗಿ ದೇವಸ್ಥಾನದಲ್ಲಿ ದೀಪೋತ್ಸವವನ್ನು ಆಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement