ಚಳವಳಿಗಾರರಿಂದ ಸಿಎಂಗೆ ಸನ್ಮಾನ
ಮೈಸೂರು: ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೈಸೂರು ಕನ್ನಡ ಚಳವಳಿಗಾರರು ಸನ್ಮಾನಿಸಿದರು.
58ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಸಿಎಂ ನಿವಾಸದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಕನ್ನಡ ಚಳವಳಿಗಾರ ಅ.ತಿ. ರಂಗನಾಥ್, ಮೈಸೂರು ಜಿ.ಪಂ. ಮಾಜಿ ಅಧ್ಯಕ್ಷ ಕೆ.ಸಿ. ಬಲರಾಂ, ಟಿ. ನರಸೀಪುರ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ವಜ್ರೇಗೌಡ, ಲಯನ್ ಎಂ. ಸಂಜೀವ ಶೆಟ್ಟಿ, ಲಯನ್ ಎಂ. ಶಿವಸ್ವಾಮಿ, ಎಂ. ಜಯಪ್ರಕಾಶ್. ಶಿವಕುಮಾರ್, ಪ್ರಕಾಶ್, ಎಂ.ಎಸ್. ಗಿರೀಶ್ ಕುಮಾರ್ ಇದ್ದರು.