ನೋಟು ಮುದ್ರಣ ನಗರದಲ್ಲಿ ರಾಜ್ಯೋತ್ಸವ
ಕ.ಪ್ರ.ವಾರ್ತೆ ಮೈಸೂರು ನ. 3
ನೋಟು ಮುದ್ರಣ ನಗರದ ಸಮುದಾಯ ಭವನದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಸಮಿತಿಯಿಂದ 58ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿತು.
ನಾಡದೇವಿ ಭುವನೇಶ್ವರಿಗೆ ಪೂಜೆ ಸಲ್ಲಿಸಲಾಯಿತು. ನೋಟು ಮುದ್ರಣ ನಿಯಮಿತದ ನಿರ್ದೇಶಕ ಎಸ್. ಮಾಧವರಾವ್ ಕನ್ನಡ ಧ್ವಜಾರೋಹಣ ಮಾಡಿ, ಕರ್ನಾಟಕದ ಹಿರಿಮೆಗಳ ಬಗ್ಗೆ ಮಾತನಾಡಿ, ನಗರದ ನೋಟು ಮುದ್ರಣಾಲಯವು ಗುಣಮಟ್ಟ ಮತ್ತು ಉತ್ಪಾದನೆಯಲ್ಲಿ ಪ್ರಪಂಚದಲ್ಲೆ ಉನ್ನತ ಸ್ಥಾನವನ್ನು ಹೊಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಮಾನಸ ಶ್ರೀಪತಿ ಮಾತನಾಡಿ, ಕನ್ನಡ ನಾಡು-ನುಡಿ, ಕರ್ನಾಟಕದ ಹಿರಿಮೆ, ಗರಿಮೆ ಮತ್ತು ಸಾಧಕರ ಬಗ್ಗೆ ತಿಳಿಸಿದರು. ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಆರ್.ಎನ್. ವಾಲ್ಮೀಕಿ ಮತ್ತು ಎಸ್. ತಲ್ಕೇರಪ್ಪ ಇದ್ದರು. ಸಹನಾ ಶೃಂಗಾರಿ ಸ್ವಾಗತಿಸಿದರು. ವಾಗ್ದೇವಿ ಸಂಗೀತ ಶಾಲೆಯ ಮಕ್ಕು ಪ್ರಾರ್ಥನೆ ಸಲ್ಲಿಸಿ, ನಾಡಗೀತೆ ಹಾಡಿದರು. ವಿಘ್ನೇಶ್ ಮಲ್ಲೇಶ್ ವಂದಿಸಿದರು. ಭಾನುಪ್ರಕಾಶ್ ನಿರೂಪಿಸಿದರು.