ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಹದೇಶ್ವರ ಜಾತ್ರಾ ಮಹೋತ್ಸವ ಆರಂಭ

Mainashree
Updated On : 3 Nov 2013, 11:29 am

ಕ.ಪ್ರ.ವಾರ್ತೆ  ಮೈಸೂರು  ನ. 3
ದೀಪಾವಳಿ ಅಂಗವಾಗಿ ಪ್ರತಿವರ್ಷ ಆಯೋಜಿಸುವ ಮಹದೇಶ್ವರ ಜಾತ್ರಾ ಮಹೋತ್ಸವವು ನಗರದ ಕುಂಬಾರ ಕೊಪ್ಪಲಿನಲ್ಲಿ ಭಾನುವಾರ ಆರಂಭವಾಯಿತು.
ಕುಂಬಾರ ಕೊಪ್ಪಲು ಗ್ರಾಮಾಭ್ಯುದಯ ಸಂಘದ ಆಶ್ರಯದಲ್ಲಿ ಪುರಾತನ ಪ್ರಸಿದ್ಧ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಮೂರು ದಿನಗಳ ಕಾಲ ವಿಶೇಷ ಪೂಜೆ, ಅಭಿಷೇಕ ಹಾಗೂ ಉತ್ಸವ ನಡೆಯಲಿದೆ.
ನ.4ರಂದು ಹಾಲಹರವಿ ಹುಲಿವಾಹನೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಹರಕೆ ಧಾರ್ಮಿಕ ಕಾರ್ಯಕ್ರಮ ಸಹ ನಡೆಯಲಿದೆ. 5ರಂದು ದೇವಸ್ಥಾನದ ಆವರಣದಲ್ಲಿ ಕೊಂಡೋತ್ಸವ ಏರ್ಪಡಿಸಿದೆ.
ಕುಸ್ತಿಗೆ ಚಾಲನೆ: ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘ, ಯಂಗ್ ಸ್ಟಾರ್ ಕ್ರೀಡಾ ಸಂಸ್ಥೆ ಹಾಗೂ ಏಕದಂತ ಯುವಕರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಪಂದ್ಯಾವಳಿಯನ್ನು ಮೇಯರ್ ಎನ್.ಎಂ. ರಾಜೇಶ್ವರಿ ಉದ್ಘಾಟಿಸಿದರು.
ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಸಿ. ಕೃಷ್ಣ, ನಗರ ಪಾಲಿಕೆ ಸದಸ್ಯರಾದ ಕೆ.ಟಿ. ಚಲುವೇಗೌಡ, ಶಿವಮಾದು, ಶಿವಣ್ಣ ಭಾಗವಹಿಸಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ಡಿ. ಮಾದೇಗೌಡ, ಅಭಿಮಾನಿ ಸಂಘದ ಅಧ್ಯಕ್ಷ ಗಣೇಶ್. ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಇದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಈಗಾಗಲೇ 10 ತಂಡಗಳು ಆಗಮಿಸಿದ್ದು, ಒಟ್ಟು 25 ತಂಡಗಳು ಬರುವ ನಿರೀಕ್ಷೆಯಿದೆ. ಮೊದಲ ಬಹುಮಾನ 50 ಸಾವಿರ, ದ್ವಿತೀಯ ಬಹುಮಾನ 30 ಸಾವಿರ ಹಾಗೂ ತೃತೀಯ ಬಹುಮಾನ 15 ಸಾವಿರ ನೀಡಲಾಗುವುದು. ನ.5ರಂದು ಸಂಜೆ 7ಕ್ಕೆ ನಡೆಯಲಿರುವ ಸಮಾರೋಪದಲ್ಲಿ ವಸತಿ ಖಾತೆ ಸಚಿವ ಅಂಬರೀಶ್ ಬಹುಮಾನ ವಿತರಿಸುವರು ಎಂದು ಕಾರ್ಯದರ್ಶಿ ಅನಿಲ್‌ಕುಮಾರ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement