ಮಹದೇಶ್ವರ ಜಾತ್ರೆಗೆ ಚಾಲನೆ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ನ. 3
ಪಟ್ಟಣಕ್ಕೆ ಸಮೀಪವಿರುವ ಮಹದೇಶ್ವರ ಸ್ವಾಮಿಯ ನಾಲ್ಕು ದಿನಗಳ ಜಾತ್ರಾ ಮಹೋತ್ಸಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಶನಿವಾರ ರಾತ್ರಿ ಸ್ವಾಮಿಯ ಮಠದಿಂದ ಉದ್ಭವ ಸ್ಥಾನಕ್ಕೆ ಮೆರವಣಿಗೆ ಮೂಲಕ ತರಲಾಯಿತು. ಭಾನುವಾರ ಸಂಪ್ರದಾಯದಂತೆ ಹೆಣ್ಣು ಮಕ್ಕಳಿಂದ ಹಾಲರವಿ ಸೇವೆಯ ಮೂಲಕ ದೇವರಿಗೆ ಸಂಬಂಧಿಸಿದ ಛತ್ರಿ, ಚಾಮರಕ್ಕೆ ಪೂಜೆ ಸಲ್ಲಿಸಿ ಮಂಗಳವಾದ್ಯ ಹಾಗೂ ನಂದಿ ಧ್ವಜದೊಂದಿಗೆ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು. ನ.4ರಂದು ದೇವಸ್ಥಾನದ ಆವರಣದಲ್ಲಿ ರಥೋತ್ಸವ ನಡೆಯಲಿದ್ದು, ಅಂದು ರಾತ್ರಿ ಅಗ್ನಿಕೊಂಡ ಜರುಗಲಿದೆ. ನ.5ರಂದು ಹಗಲು ಪಂಜಿನ ಸೇವೆ ಹಾಗೂ ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ದೇವರ ಮೆರವಣಿಗೆ ನಡೆಯಲಿದೆ.