ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಸ್ತು ಪ್ರದರ್ಶನ: ಬೇವು ಮಳಿಗೆ ಉದ್ಘಾಟನೆ

Mainashree
Updated On : 3 Nov 2013, 11:30 am

ಕ.ಪ್ರ.ವಾರ್ತೆ  ಮೈಸೂರು  ನ. 3
ನಗರದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಬೇವು ಪ್ರತಿಷ್ಠಾನವು ನೋನಿ ಎಂಬ ಆಯುರ್ವೇದಿಕ್ ಔಷಧದ ಪ್ರಚಾರ ಮತ್ತು ಮಾರಾಟ ಮಾಡುವ ಸಲುವಾಗಿ ಆರಂಭಿಸಿರುವ ಮಳಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಜನ ಸುಖ ಜೀವನಕ್ಕೆ ಮನಸೋತಿರುವ ಪ್ರಸ್ತುತ ಕಾಲದಲ್ಲಿ ರಾಜಕಾರಣಿಗಳು, ವಿದ್ಯಾವಂತರು, ಉದ್ಯೋಗಸ್ಥರು ಸೇರಿದಂತೆ ನಗರವಾಸಿಗಳಾಗಿ ವಿದೇಶಗಳಲ್ಲಿ ವಾಸಿಸಲು ಇಚ್ಛೆಪಡುತ್ತಾರೆ. ಆದರೆ, ಬೇವು ಪ್ರತಿಷ್ಠಾನದ ಯಮುನಾ ಶ್ರೀನಿಧಿ, ಶ್ರೀನಿಧಿ ದೇಶಿಕಾಮಣಿ ಅವರು ಗ್ರಾಮೀಣ ಜನರ ಬದುಕನ್ನು ಹಸನು ಮಾಡಲು ಕೈಗೊಂಡಿರುವ ಶ್ಲಾಘನೀಯ ಎಂದರು.
ನಾವೂ ಸೇರಿದಂತೆ ಎಲ್ಲರೂ ಅವರ ಆದರ್ಶ ಬದುಕನ್ನು ಮೈಗೂಡಿಸಿಕೊಳ್ಳಬೇಕು. ಅವರ ಆದರ್ಶ, ಹಂಬಲ, ಬದ್ಧತೆ ನಮ್ಮ ಯುವ ಸಮಾಜಕ್ಕೆ ದಾರಿದೀಪವಾಗಿದೆ. ಅವನರನ್ನು ಅನುಸರಿಸಿದಾಗ ಗ್ರಾಮೀಣ ಭಾರತವನ್ನು ಹಸನಾಗಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು.
 ಶಾಸಕ ಗೋ. ಮಧುಸೂದನ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ. ಮಂಜುನಾಥ್, ಪಾಲಿಕೆ ಮಾಜಿ ಸದಸ್ಯ ಎಂ.ಎಸ್. ಸತ್ಯನಾರಾಯಣ, ಸದಸ್ಯೆ ವನಿತಾ ಪ್ರಸನ್ನ, ಉದ್ಯಮಿ ಚಂದ್ರಶೇಖರ್, ಮೂಗೂರು ನಂಜುಂಡಸ್ವಾಮಿ, ಟ್ರಸ್ಟಿ ಸಿ. ಚನ್ನೇಗೌಡ, ಯಮುನಾ ಶ್ರೀನಿಧಿ, ಶ್ರೀನಿಧಿ ದೇಶಿಕಾಮಣಿ ಇದ್ದರು.
ನೋನಿ ಕೃಷಿಯಿಂದ ಬಾಳು ಹಸನು: ಚನ್ನೇಗೌಡ
ಮೈಸೂರು: ಬೇವು ನೋನಿ ಮಳಿಗೆಯಲ್ಲಿ ನೋನಿ ಎಂದು ಕರೆಯಲ್ಪಡುವ ಮೊರಿಂಡಾ ಸಿಟ್ರಿಪೋಲಿಯಾ ಉಷ್ಣ ವಲಯದ ಹಣ್ಣಿನಿಂದ ತಯಾರಿಸಿದ ಆಯುರ್ವೇದಿಕ್ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವಂತಹ ಹಣ್ಣು ಇದಾಗಿದೆ ಎಂದು ಬೇವು ಪ್ರತಿಷ್ಠಾನದ ಟ್ರಸ್ಟಿ ಸಿ. ಚನ್ನೇಗೌಡ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 'ಬೇವು ದಂಪತಿ'ಗಳೆಂದು ಕರೆಯಲ್ಪಡುವ ಅನಿವಾಸಿ ಭಾರತೀಯರಾದ ಯುಮುನಾ ಶ್ರೀನಿಧಿ ಮತ್ತು ಶ್ರೀನಿಧಿ ದೇಶಿಕಾಮಣಿ ಅವರು ಬೇವು ಪ್ರತಿಷ್ಠಾನ ಸ್ಥಾಪಿಸಿದರು. ನಂತರ ಭಾರತಕ್ಕೆ ಆಗಮಿಸಿ ಇಲ್ಲಿಯ ಜನರ ಆರೋಗ್ಯ ಸುಧಾರಿಸಲು ಪಣತೊಟ್ಟು ಕಾರ್ಯಕ್ರಮ ಹಮ್ಮಿಕೊಂಡರು. ಅದರ ಭಾಗವಾಗಿ ಹಾಸನದ 5 ಗ್ರಾಮಗಳು ಹಾಗೂ ತುಮಕೂರಿನ 1 ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಲ್ಲಿ ಬೇವು ಪ್ರತಿಷ್ಠಾನ ಸ್ಥಾಪಿಸಿ ಕಾರ್ಯಕ್ರಮ ನಡೆಸಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement