ಸರಗಳ್ಳರ ಬಂಧನ
ಮೈಸೂರು: ಮೂರು ತಿಂಗಳ ಹಿಂದೆ ಸರಗಳ್ಳತನ ಮಾಡಿದ್ದ ಹೆಬ್ಬಾಳಿನ ಕುಮಾರ್, ಸೋಮಶೇಖರ್ ಎಂಬವರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ಜು.2ರಂದು ವನಜಾಕ್ಷಿ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದು ಅವರ 37 ಗ್ರಾಂ. ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು. ಇದೀಗ ಠಾಣೆಯ ಇನ್ಸ್‌ಪೆಕ್ಟರ್ ಸಿ.ವಿ. ರವಿ ಮತ್ತು ಸಿಬ್ಬಂದಿ ಆರೋಪಿಗಳಿಬ್ಬರನ್ನು ಬಂಧಿಸಿ, ಅವರಿಂದ 37 ಗ್ರಾಂ. ಚಿನ್ನದ ಸರವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಈ ಕಾರ್ಯವನ್ನು ಪೊಲೀಸ್ ಆಯುಕ್ತ ಡಾ. ಸಲೀಂ ಶ್ಲಾಘಿಸಿದ್ದಾರೆ.