ಸರ್ಕಾರಿ ನೌಕರರಿಗೆ ಆರೋಗ್ಯ ತಪಾಸಣೆ
ಕ.ಪ್ರ.ವಾರ್ತೆ ಮೈಸೂರು ನ. 3
ಸರ್ಕಾರಿ ನೌಕರರು, ನಿವೃತ್ತ ನೌಕರರ ಆರೋಗ್ಯ ರಕ್ಷಣೆಗೆ ಉಚಿತ ತಪಾಸಣಾ ಶಿಬಿರ ಭಾನುವಾರ ನಡೆಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆಯು ಕೆನರಾ ಬ್ಯಾಂಕ್ ಸಹಯೋಗದಲ್ಲಿ ಧನ್ವಂತರಿ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಈ ಶಿಬಿರದಲ್ಲಿ ರಕ್ತ ಗುಂಪಿನ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ನ್ಯೂರೋಪತಿ ತಪಾಸಣೆ ಹಾಗೂ ಇಸಿಜಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿಬಿರದ ಸಂಚಾಲಕಿ ಹಾಗೂ ಸಂಘದ ಖಜಾಂಚಿ ಡಾ. ಮನೋನ್ಮಣಿ, ಹಾಲಿ ಸರ್ಕಾರಿ ನೌಕರರು, ನಿವೃತ್ತ ನೌಕರರು ಹಾಗೂ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ಉಚಿತ ಶಿಬಿರವನ್ನು ನಡೆಸಲಾಗುತ್ತಿದ್ದು, ನೂರಾರು ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ತಜ್ಞವೈದ್ಯರಾದ ಡಾ. ಸಿ.ಎಚ್. ಲಕ್ಷ್ಮೀನಾರಾಯಣ, ಡಾ. ಎಚ್.ವಿ. ಜಗ್ನನಾಥ್ ಶೆಟ್ಟಿ, ಡಾ. ಬಿ.ಆರ್. ಆನಂದ್, ಡಾ. ಸಿ.ಜಿ. ಪ್ರಹ್ಲಾದ್‌ರಾವ್, ಡಾ.ಕೆ.ಪಿ. ರಮೇಶ್, ಡಾ. ಎಂ.ವಿ. ಶಾಂತಕುಮಾರ್ ಹಾಗೂ ಡಾ. ವಿಠ್ಠಲ್ ಭಾಗವಹಿಸಿದ್ದರು. ಶಿಬಿರದಲ್ಲಿ 97 ಮಂದಿ ಭಾಗವಹಿಸಿದ್ದರು.