ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಬೀಳ್ಕೊಡುಗೆ
ಕ.ಪ್ರ.ವಾರ್ತೆ ಮೈಸೂರು ನ. 3
ವಿಭಾಗದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರಾಗಿ ವಯೋನಿವೃತ್ತರಾದ ಡಾ. ಎಚ್.ಆರ್. ಕೃಷ್ಣಯ್ಯಗೌಡ ಅವರಿಗೆ ಜಿಲ್ಲಾ ಸಹಕಾರ ಯುನಿಯನ್ ವತಿಯಿಂದ ಸನ್ಮಾನಿಸಲಾಯಿತು.
ಶಾಸಕ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ನಿವೃತ್ತಿ ನಂತರ ಸಹಕಾರ ಕ್ಷೇತ್ರದಲ್ಲಿ ಅವರ ಸೇವೆಯನ್ನು ಸಹಕಾರಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.
ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಸಿ. ಬಸವೇಗೌಡ ಮಾತನಾಡಿ, ಯಾವುದೇ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುವ ವೇಳೆ, ಯಾವುದೇ ಕೆಲಸದಲ್ಲಿ ಕಾರ್ಯಮಗ್ನರಾಗಿ ಸ್ವಪ್ರೇರಣೆಯಿಂದ ಸಂಸ್ಥೆಗೆ ತಿಳಿವಳಿಕೆ ನೀಡುತ್ತಿದ್ದರು. ಸಹಕಾರಿಗಳು ಇವರನ್ನು ಸಂಪರ್ಕಿಸುವಾಗ ಇವರಲ್ಲಿರುವ ಸೌಜನ್ಯತೆ ಬುದ್ಧಿವಂತಿಕೆ ಮೆಚ್ಚುವಂತಹದು ಎಂದು ತಿಳಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷ್ಣಯ್ಯಗೌಡ, ಸಹಕಾರ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಅಧಿಕಾರಿಗಳು ತಾವು ನಿರ್ವಹಿಸುವ ಕೆಲಸ ಕಾರ್ಯಗಳಲ್ಲಿ ಪ್ರತಿ ದಿನ ಅದೊಂದು ತರಬೇತಿ ಇದ್ದಾಗೆ, ಸಹಕಾರ ರಂಗದಲ್ಲಿ ನಿಜವಾಗಿ ಕೆಲಸ ನಿರ್ವಹಿಸುವಂತಹ ವ್ಯಕ್ತಿಗೆ ತೃಪ್ತಿ ಸಿಗುತ್ತದೆ. ಜಿಲ್ಲೆಯ ಎಲ್ಲ ಸಹಕಾರ ಸಂಸ್ಥೆಗಳ ಪರವಾಗಿ ಸನ್ಮಾನ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್, ಲ್ಯಾಂಪ್ಸ್ ಮಹಾಮಂಡಳದ ಅಧ್ಯಕ್ಷ ಎಂ. ಕೃಷ್ಣಯ್ಯ ಮಾತನಾಡಿದರು. ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷೆ ಬೃಹದಾಂಭ, ನಿರ್ದೇಶಕಿ ಗೌರಮ್ಮ, ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಮಹೇಶ್, ಸಹಕಾರ ಸಂಘಗಳ ಜಂಟಿ ನಿಬಂಧಕ ಎಚ್.ಸಿ. ಜೋಷಿ, ಹಿರಿಯ ಸಹಕಾರಿಗಳಾದ ಪಿ. ನಾಗರಾಜ್, ಮಾಜಿ ಅಧ್ಯಕ್ಷ ಕೆ. ಕೃಷ್ಣ ಹಾಗೂ ಯುನಿಯನ್ ನಿರ್ದೇಶಕರು, ಸ್ಥಳೀಯ ಸಹಕಾರ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸಹಕಾರ ತರಬೇತಿ ಕೇಂದ್ರದ ಸಿಬ್ಬಂದಿ ಹಾಗೂ ಜಿಲ್ಲಾ ಸಹಕಾರ ಯುನಿಯನ್ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಬಿ. ಮಹದೇವಸ್ವಾಮಿ ಸ್ವಾಗತಿಸಿದರು. ಕೆ. ಮಲ್ಲಯ್ಯ ನಿರೂಪಿಸಿದರು.