ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಾಂಸ್ಕೃತಿಕ ಅಭಿರುಚಿ ಕ್ಷೀಣ: ಜಂಬೆ ವಿಷಾದ

Mainashree
Updated On : 3 Nov 2013, 11:28 am

ಮೈಸೂರು: ಇಂದು ಶಾಲಾ- ಕಾಲೇಜುಗಳಲ್ಲಿ ಸಾಂಸ್ಕೃತಿಕ ಅಭಿರುಚಿ ಕ್ಷೀಣಿಸುತ್ತಿದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಚಿದಂಬರ ರಾವ್ ಜಂಬೆ ವಿಷಾದಿಸಿದರು.
ಕೃಷ್ಣೆ ನೃತ್ಯ ಶಾಲೆಯು ವಾರ್ಷಿಕೋತ್ಸವದ ಅಂಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಚಿಗಿರೆ ವರ್ಷಂ ಸಾಂಸ್ಕೃತಿಕ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಮಕ್ಕಳ ಮೇಲೆ ಪೋಷಕರು ಅಂಕ ಗಳಿಕೆಗಾಗಿ ಒತ್ತಡ ಹೇರುವ ಪ್ರವೃತ್ತಿ ಹೆಚ್ಚಾಗಿರುವ ಕಾರಣ, ಶಾಲಾ- ಕಾಲೇಜುಗಳಲ್ಲಿ ಭಾರತೀಯ ಸಂಗೀತ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಅಭಿರುಚಿ ಇಂದು ಕ್ಷೀಣಿಸುತ್ತಿದೆ ಎಂದು ಅವರು ವಿಷಾದಿಸಿದರು.
ಇಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಿಕೊಂಡರೆ ಬದುಕಿನಲ್ಲಿ ಆತ್ಮವಿಶ್ವಾಸ ರೂಢಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ನೃತ್ಯ ಶಾಲೆಯು 54 ಮಕ್ಕಳಿಗೆ ಶಾಸ್ತ್ರೀಯ ನೃತ್ಯ ಕಲಿಸುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಅವರು ತಿಳಿಸಿದರು.
ಮೃದಂಗ ವಿದ್ವಾನ್ ನಾಗಭೂಷಣಚಾರ್ ಅವರನ್ನು ಸನ್ಮಾನಿಸಲಾಯಿತು.  ಹಿರಿಯ ಪತ್ರಕರ್ತ ಕೃಷ್ಣವಟ್ಟಂ ಮುಖ್ಯ ಅತಿಥಿಯಾಗಿದ್ದರು. ಇದಕ್ಕೂ ಮುನ್ನ ಸುಂದರೇಶ್ ತಂಡದವರು ಡೊಳ್ಳು ಕುಣಿತ ನಡೆಸಿಕೊಟ್ಟರು. ನಂತರ ವಿದುಷಿ ಡಿಂಪಲ್ ಮತ್ತು ತಂಡದವರು ಪಾರಂಪರಿಕ ಭರತನಾಟ್ಯ ಪ್ರದರ್ಶಿಸಿದರು. ದೇವಾನಂದ್ ತಂಡದವರು ರಂಗ ಗೀತೆಗಳನ್ನು ಹಾಡಿದರು. ಸಂಸ್ಥೆ ನಿರ್ದೇಶಕಿ ವಿದುಷಿ ಡಿಂಪಲ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement