23ರಂದು ಸೈಕಲ್ ಹೆರಿಟೇಜ್ ರಸಪ್ರಶ್ನೆ
ಮೈಸೂರು: ಮೈಸೂರಿನ ಎನ್ಆರ್ ಗ್ರೂಪ್ ಸಂಸ್ಥೆಯು ಭಾರತದ ಸಂಪ್ರದಾಯವನ್ನು ಬಿಂಬಿಸುವ ಸಲುವಾಗಿ ದೇಶಾದ್ಯಂತ ಸೈಕಲ್ ಹೆರಿಟೇಜ್ ರಸಪ್ರಶ್ನೆ ಸ್ಪರ್ಧೆ ನಡೆಸಲು ನಿರ್ಧರಿಸಿದ್ದು, ಅದರ ಒಂದು ಭಾಗವಾಗಿ ನ.23ರಂದು ನಗರದ ಜಗನ್ಮೋಹನ ಅರಮನೆಯಲ್ಲಿ ಸ್ಪರ್ಧೆ ಏರ್ಪಡಿಸಿದೆ. ಭಾರತದ ಪ್ರದರ್ಶಕ ಕಲೆಗಳು, ಸಂಸ್ಕೃತಿ, ಸಂಪ್ರದಾಯ ಮತ್ತು ಇತಿಹಾಸವನ್ನು ಯುವ ಮನಸ್ಸುಗಳಿಗೆ ತಿಳಿಸಲು ಈ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತರು ನ.18ರೊಳಗೆ ಖುದ್ದಾಗಿ ಅಥವಾ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ವೆಬ್ಸೈಟ್ ಢಿಢಿಢಿ.್ಛಣ್ಛಟಜಠ್ಡ್ಠಜ.್ಝಟಿನಲ್ಲಿ ಅರ್ಜಿ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬಹುದು. ಮೊ. 98451 33874 ಸಂಪರ್ಕಿಸಬಹುದು.
ತೇಜ್ಕುಮಾರ್ಗೆ 10ರಂದು ಸನ್ಮಾನ
ಮೈಸೂರು: ಮೈಸೂರು ಜಿಲ್ಲಾ ಚದುರಂಗ ಸಂಘದಿಂದ ನ.10ರ ಬೆಳಗ್ಗೆ 11ಕ್ಕೆ ನಗರದ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಚೆಸ್ ಚಾಂಪಿಯನ್ ಎಂ.ಎಸ್. ತೇಜಕುಮಾರ್ಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಅಂದಿನ ಕಾರ್ಯಕ್ರಮದಲ್ಲಿ ಶಾಸಕ ಎಂ.ಕೆ. ಸೋಮಶೇಖರ್, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಸುರೇಶ್, ಸಂಘದ ಅಧ್ಯಕ್ಷ ಎಸ್.ಕೆ. ಆನಂದತೀರ್ಥ ಭಾಗವಹಿಸುವರು. ನ.9ರಂದು ಜಿಲ್ಲಾ ಮಟ್ಟದ ಚದುರಂಗ ಪಂದ್ಯಾವಳಿ ನಡೆಯಲಿದೆ. ಮೊ. 81238 19220 ಸಂಪರ್ಕಿಸಬಹುದು.
ಗ್ರಂಥಾಲಯ ಸಪ್ತಾಹ
ಪ್ರಮತಿ ಹಿಲ್ವ್ಯೂ ಅಕಾಡೆಮಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಮೈಲಿಸಾ ಸಹಯೋಗದೊಂದಿಗೆ ನ.18ರಂದು ಗ್ರಂಥಾಲಯ ಗಣಕೀಕರಣ ಕುರಿತ ಕಾರ್ಯಾಗಾರ ನಡೆಯಲಿದ್ದು, ದೂ. 0821- 4246666 ಸಂಪರ್ಕಿಸಬಹುದು.
ಮಣಿ ನೇಮಕ
ಮೈಸೂರು: ಅಖಿಲ ಭಾರತ ಹಿಂದೂ ಯುವಕ್ ಸಭಾದ ನಗರಾಧ್ಯಕ್ಷರಾಗಿ ಗಾಯತ್ರಿಪುರಂನ ಪಿ. ಮಣಿ ನೇಮಕವಾಗಿದ್ದಾರೆ.
ಮಾಸಿಕ ಸಭೆ
ಮೈಸೂರು: ಯೂತ್ ಹಾಸ್ಟೆಲ್ಸ್ ಗಂಗೋತ್ರಿ ಘಟಕದ ಮಾಸಿಕ ಸಭೆಯು ನ.17ರ ಮಧ್ಯಾಹ್ನ 3ಕ್ಕೆ ಸರಸ್ವತಿಪುರಂನ ತೆಂಗಿನ ತೋಪಿನಲ್ಲಿರುವ ಸಮುದಾಯ ಭವನದಲ್ಲಿ ನಡೆಯಲಿದೆ.