ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಡಿನ ಮಧ್ಯೆ ಮಣ್ಣಾದ ರಾಜೇಶ್

Rashmi Kasaragodu
Updated On : 4 Nov 2013, 11:37 am

ಎಚ್.ಡಿ. ಕೋಟೆ: 'ಹಳ್ಳಿ ಹೈದ ಪ್ಯಾಟೇಗ್ ಬಂದ' ರಿಯಾಲಿಟಿ ಶೋ ಕಾರ್ಯಕ್ರಮದ ವಿಜೇತ ಹಾಗೂ ನಟ ರಾಜೇಶ್ನ ಅಂತ್ಯಸಂಸ್ಕಾರ ಸೋಮವಾರ ಮಧ್ಯಾಹ್ನ ತಾಲೂಕಿನ ಬಳ್ಳೆ ಹಾಡಿಯಲ್ಲಿ ನೆರವೇರಿತು. ಆದಿವಾಸಿ ಗಿರಿಜನರ ಸಂಪ್ರದಾಯದಂತೆ ರಾಜೇಶನ ಮನೆ ಸಮೀಪದಲ್ಲಿಯೇ ಅಂತ್ಯಸಂಸ್ಕಾರ ನಡೆಸಲಾಯಿತು.
ಮೈಸೂರು ನಗರದ ಪರಸಯ್ಯನಹುಂಡಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಾಜೇಶ್ ಭಾನುವಾರ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಸಾವಿಗೀಡಾಗಿದ್ದರು. ಶವವನ್ನು ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಬಳ್ಳೆ ಹಾಡಿಗೆ ತರಲಾಗಿತ್ತು.
ರಾಜೇಶನ ಅಂತಿಮ ದರ್ಶನ ಪಡೆಯಲು ಬಂದ ಪ್ರಮುಖರಲ್ಲಿ 'ಹಳ್ಳಿ ಹೈದ ಪ್ಯಾಟೇಗ್ ಬಂದ' ರಿಯಾಲಿಟಿ ಶೋನಲ್ಲಿ ಜತೆಗಾತಿಯಾಗಿದ್ದ ನಟಿ ಐಶ್ವರ್ಯ, ರಾಜೇಶನ ಎರಡನೇ ಸಿನಿಮಾ 'ಲವ್ ಈಸ್ ಪಾಯ್ಸನ್' ನಿರ್ಮಾಪಕ ಸೋಮಶೇಖರ್, ನಿರ್ದೇಶಕ ಕೇಶವಮೂರ್ತಿ, ಮಾಜಿ ಸಚಿವ ವರ್ತೂರ್ ಪ್ರಕಾಶ್ ಪುತ್ರ ತೇಜಸ್, ಮಾಜಿ ಸಚಿವ ಎಂ. ಶಿವಣ್ಣ, ಆದಿವಾಸಿ ಗಿರಿಜನ ಮುಖಂಡ ಕಾವೇರ ಮತ್ತಿತರು ಇದ್ದರು.
ಗಾಳಿಮಾತು: ರಾಜೇಶ್ ಕಳೇಬರದ ಅಂತಿಮ ದರ್ಶನ ಪಡೆಯಲು ಚಿತ್ರನಟ ಪುನೀತ್ ರಾಜ್ಕುಮಾರ್ ಬರುವರೆಂದು ಹಾಡಿಯಲ್ಲಿ ಗಾಳಿಮಾತು ಹಬ್ಬಿತ್ತು. ಆದರೆ ಬರಲಿಲ್ಲ. ಪುನೀತ್ ಬರುವರೆಂಬ ಉದ್ದೇಶದಿಂದಲೂ ಸಾವಿರಾರು ಜನರು ಅಲ್ಲಿ ಸೇರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement