ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾನಾ ತರಬೇತಿ, ಶಿಬಿರಗಳಿಗೆ ಅರ್ಜಿ ಆಹ್ವಾನ

Rashmi Kasaragodu
Updated On : 5 Nov 2013, 12:22 pm

ಕ.ಪ್ರ.ವಾರ್ತೆ   ಮೈಸೂರು   ನ. 4
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಮೊದಲ ಮತ್ತು ದ್ವಿತೀಯ ಸೆಮಿಸ್ಟರ್ ಡಿಪ್ಲೋಮಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ನ.5ರಿಂದ 15ರವರೆಗೆ ಬೆಳಗ್ಗೆ 10ರಿಂದ ತರಬೇತಿ ನೀಡಲಾಗುತ್ತದೆ. ಅರ್ಹ ಗ್ರಾಮೀಣ ಅಭ್ಯರ್ಥಿಗಳಿಗೆ ಉಚಿತವಾಗಿ ವಸತಿ ಸೌಲಭ್ಯ ಕಲ್ಪಿಸಲಾಗುವುದು. ವಿವರಕ್ಕೆ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ, ಶೇಷಾದ್ರಿ ಅಯ್ಯರ್ ರಸ್ತೆ, ಹಳೆಯ ಆರ್ಎಂಸಿ ಹತ್ತಿರ, ಮೈಸೂರು ಇಲ್ಲಿ ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಖುದ್ದು ಭೇಟಿ ನೀಡಿ ಅಥವಾ ಮೊ. 94492 11994, 82775 20042 ಹೆಸರು ನೋಂದಾಯಿಸಿಕೊಳ್ಳಬಹುದು.
ಕಂಪ್ಯೂಟರ್ ತರಬೇತಿ: ಅಂಗವಿಕಲರ ಪುನರ್ವಸತಿ ಕೇಂದ್ರವು 18ರಿಂದ 25 ವರ್ಷದೊಳಗಿನ ಶ್ರವಣದೋಷವುಳ್ಳವರಿಗೆ ನ.6ರಿಂದ ಡಿ.21ರವರೆಗೆ ಉದ್ಯೋಗ ಆಧಾರಿತ ಕಂಪ್ಯೂಟರ್ ತರಬೇತಿ ನೀಡುತ್ತಿದೆ. ಪಿಯುಸಿ, ಡಿಪ್ಲೋಮಾ, ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿರುವ ಆಸಕ್ತ ವಿದ್ಯಾರ್ಥಿಗಳು ನ.5ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರೊಳಗೆ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ಮೈಸೂರು ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ವಿವರಕ್ಕೆ ಅನೇಬಲ್ ಇಂಡಿಯಾ ಸಂಸ್ಥೆ ದೂ. 080-42823636 ಅಥವಾ ಡಿಡಿಆರ್ಸಿ 0821- 2490222 ಸಂಪರ್ಕಿಸಬಹುದು.
ಸಂಗೀತ ತರಬೇತಿ ಶಿಬಿರ: ಗಾನರಶ್ಮಿ ಸಂಗೀತ ಸಂಸ್ಥೆಯು ನ.6ರಿಂದ ಸಂಗೀತ ತರಬೇತಿ ಶಿಬಿರ ಆಯೋಜಿಸಿದೆ. 7 ವರ್ಷದಿಂದ 60 ವರ್ಷದವರಿಗೆ 6 ತಿಂಗಳ ಅವಧಿಯ ಈ ತರಬೇತಿಯಲ್ಲಿ ಗಾಯನ, ಕೀಬೋರ್ಡ್, ಗಿಟಾರ್, ಮ್ಯಾಂಡೊಲಿನ್ ತರಬೇತಿ ನೀಡಲಾಗುತ್ತದೆ. ತರಬೇತಿಯನ್ನು ನಂ.37, ಸತ್ಯಮಾರ್ಗ, ಸಿದ್ಧಾರ್ಥನಗರ, ಮೈಸೂರು ಮತ್ತು ನಂ.8, 4ನೇ ಹಂತ, ಯಾದವಗಿರಿ, ಮೈಸೂರು. ಇಲ್ಲಿ ನೀಡಲಾಗುತ್ತದೆ. ವಿವರಕ್ಕೆ ಮೊ. 74061 58750 ಸಂಪರ್ಕಿಸಬಹುದು.
ತರಬೇತಿ: ನೇತಾಜಿ ಎಜುಕೇಷನ್ ಫೌಂಡೇಷನ್ ಕ್ಲರಿಕಲ್ ಮತ್ತು ಪ್ರೊಬೇಷನರಿ ಪರೀಕ್ಷೆ, ಸಬ್ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಪೇದೆ ಹುದ್ದೆಗೆ ತರಬೇತಿ ಆಯೋಜಿಸಿದೆ. ಎಸ್ಬಿಐ ಮತ್ತು ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ತರಬೇತಿ ನೀಡಲಾಗುತ್ತದೆ. ಆಸಕ್ತರು ನ.6ರೊಳಗೆ, ಪಿಎಸ್ಐ ಮತ್ತು ಕಾನ್ಸ್ಟೇಬಲ್ ಹುದ್ದೆಗೆ ನ.10ರೊಳಗೆ ಬೆಳಗ್ಗೆ 10.30ರಿಂದ ರಾತ್ರಿ 8.30ರೊಳಗೆ ನಂ.400, ಆತ್ರೇಯ, ಜಗನ್ಮೋಹನ ಅರಮನೆ ಹತ್ತಿರ, ಅವಿಲಾ ಕಾನ್ವೆಂಟ್ ಎದುರು, ಮೈಸೂರು ಇಲ್ಲಿ ಖುದ್ದಾಗಿ ಅಥವಾ ಮೊ. 99806 39953 ಅಥವಾ 87479 73808 ಸಂಪರ್ಕಿಸಬಹುದು.
ಉಚಿತ ಕಾರ್ಯಾಗಾರ: ಜ್ಞಾನದೀಪ್ತಿ ಟ್ರಸ್ಟ್ ಪಿಎಸ್ಐ ಹುದ್ದೆ ಆಕಾಂಕ್ಷಿಗಳಿಗೆ ಒಂದು ದಿನದ ಉಚಿತ ಕಾರ್ಯಾಗಾರ ಆಯೋಜಿಸಿದೆ. ಆಸಕ್ತರು ನ.6ರೊಳಗೆ ನಂ.10/2, ಎಂ.ಎನ್. ಜೋಯಿಸ್ ರಸ್ತೆ, ಇಲ್ಲಿ ಪ್ರತಿದಿನ ಸಂಜೆ 5ರಿಂದ 8ರವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದು. ವಿವರಕ್ಕೆ ಮೊ. 98440 99674 ಸಂಪರ್ಕಿಸಬಹುದು.
ತರಬೇತಿ ಕಾರ್ಯಾಗಾರ: ಬೆಳವಾಡಿಯ ಜಿಐಎಂಡಿಎಸ್ ಪದವಿ ಪೂರ್ವ ಮತ್ತು ಪದವಿ ಕಾಲೇಜು 2 ದಿನಗಳ ವಿಶೇಷ ಕಲಿಕಾ ಪರೀಕ್ಷಾ ತರಬೇತಿ ಕಾರ್ಯಾಗಾರವನ್ನು ನ.9 ಮತ್ತು 10ರಂದು ಬೆಳಗ್ಗೆ 8.30ರಿಂದ ಸಂಜೆ 5ರವರೆಗೆ ಹಮ್ಮಿಕೊಂಡಿದೆ. ಸಮಯ ವ್ಯವಸ್ಥಾಪನೆ, ಗಣಿತ, ಸಮಾಜ ವಿಜ್ಞಾನ, ಇಂಗ್ಲಿಷ್, ವಿಜ್ಞಾನ ಮತ್ತು ಕನ್ನಡ ವ್ಯಾಕರಣ ತಿಳಿಸಿಕೊಡಲಾಗುವುದು. ವಿವರಕ್ಕೆ ಮೊ. 76764 88880 ಅಥವಾ 94811 50148 ಸಂಪರ್ಕಿಸಬಹುದು.
ತರಬೇತಿಗೆ ಅರ್ಜಿ: ಮೈಸೂರು ಕರಸ್ಪಾಂಡೆನ್ಸ್ ಕಾಲೇಜು ಪ. ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಂದ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ನ.21ರ ಸಂಜೆ 5.30ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ನಂ. 18, ರಕ್ಷಿತ, ಪಾಪರಾಮ್ ಹೌಸ್, ಕಾಳಿದಾಸ ರಸ್ತೆ, ವಿ.ವಿ. ಮೊಹಲ್ಲಾ, 12ನೇ ಅಡ್ಡರಸ್ತೆ, ಮೈಸೂರು- 02 ಇಲ್ಲಿ ಕಚೇರಿ ವೇಳೆ ಅರ್ಜಿ ಸಲ್ಲಿಸಬಹುದು. 1 ಲಕ್ಷ ರು. ಆದಾಯದ ಒಳಗೆ ಇರುವ, ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ಅಂಕಪಟ್ಟಿ, ಇತ್ತೀಚಿನ 4 ಭಾವಚಿತ್ರಗಳ ಜೊತೆ ಅರ್ಜಿ ಸಲ್ಲಿಸಬೇಕು. ವಿವರಕ್ಕೆ ಮೊ. 99001 95828 ಅಥವಾ 82771 11702 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement