ಪ್ರತಿಭಾಕುಮಾರಿ ನಿಧನಕ್ಕೆ ಸಂತಾಪ
ಕ.ಪ್ರ.ವಾರ್ತೆ ಮೈಸೂರು ನ. 4
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯಾಧ್ಯಕ್ಷೆ ಬಿ.ಎಸ್. ಪ್ರತಿಭಾಕುಮಾರಿ ಅವರ ಅಕಾಲಿಕ ಮರಣಕ್ಕೆ ಜಿಲ್ಲಾ ಸಮಿತಿ ಸಂತಾಪ ಸೂಚಿಸಿದೆ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಕೇವಲ 19ನೇ ವಯಸ್ಸಿಗೆ ಸಾಮಾಜಿಕ ಹೋರಾಟಕ್ಕೆ ಆಕರ್ಷಿತರಾಗಿ ಸಂಘಟನೆ ಸೇರಿ ರಾಜ್ಯಾದ್ಯಂತ ಮಹಿಳೆಯರ ಹಲವಾರು ಜ್ವಲಂತ ಸಮಸ್ಯೆಗಳ ವಿರುದ್ಧ ದನಿ ಎತ್ತಿದ್ದರು. ವಿದ್ಯಾರ್ಥಿ ಸಂಘದಲ್ಲಿ ಉಪಾಧ್ಯಕ್ಷರಾಗಿ, ಮತ್ತೊಮ್ಮೆ ಅಧ್ಯಕ್ಷರಾಗಿ, ಎಐಎಂಎಸ್ಎಸ್ನ ಬೆಂಗಳೂರು ಜಿಲ್ಲಾಧ್ಯಕ್ಷರಾಗಿ, ನಂತರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ರಾಜ್ಯ ಮುಖ ಸ್ತ್ರೀ ಮುಕ್ತಿ ಪತ್ರಿಕೆಯನ್ನು ಪ್ರಕಟಿಸುವುದರಲ್ಲಿ ಇವರ ಕೊಡುಗೆ ಮಹತ್ವದ್ದಾಗಿತ್ತು. ರಾಜ್ಯಾದ್ಯಂತ ಸಂಚರಿಸಿ ಮಹಿಳಾ ಹೋರಾಟಕ್ಕೆ ಶಕ್ತಿ ತುಂಬಿದ್ದರು ಎಂದು ಜಿಲ್ಲಾ ಕಾರ್ಯದರ್ಶಿ ಪಿ.ಎಸ್. ಸಂಧ್ಯಾ ಸಂತಾಪ ಸೂಚಿಸಿದ್ದಾರೆ.