ವಸ್ತು ಪ್ರದರ್ಶನದಲ್ಲಿ ಮಹಿಳಾ ಉದ್ಯಮಿ ಮಳಿಗೆ ಆರಂಭ
ಕ.ಪ್ರ.ವಾರ್ತೆ ಮೈಸೂರು ನ. 4
ನಗರದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ತೆರೆಯಲಾದ ಮಹಿಳಾ ಉದ್ಯಮಿ ಮಳಿಗೆಯನ್ನು ಡಾ. ಪಿ.ವಿ. ರತ್ನೇ ಅರಸು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಪ ಸಮಿತಿ ಅಧ್ಯಕ್ಷ ಡಿ.ಆರ್. ಚಂದ್ರನಾಯಕ ಮಾತನಾಡಿ, ಈ ವರ್ಷ ಮಹಿಳಾ ಉದ್ದಿಮೆದಾರರು ಉತ್ಪಾದನೆ ಮಾಡಿದ ವಸ್ತುಗಳ ಮಾರಾಟ ಮತ್ತು ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲ್ಲಾ ಮಳಿಗೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿ ಆಗಿರುವುದು ಸಂತಸ ತಂದಿದೆ ಎಂದರು.
ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ಡಾ. ಎಚ್.ಸಿ. ಚಂದ್ರಶೇಖರ್ ಮಾತನಾಡಿ, ಮುಂದಿನ ವರ್ಷದಿಂದ ಮಹಿಳಾ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಮಳಿಗೆ ಸ್ಥಾಪಿಲಾಗುವುದು ಎಂದು ತಿಳಿಸಿದರು.
ಉಪ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಕಾಶ್, ವ್ಯವಸ್ಥಾಪಕ ಸಿ.ವಿ. ರೆಡ್ಡಪ್ಪ, ಸದಸ್ಯರಾದ ಪಂಕಜ ನಾಗರಾಜ್, ಗಾಯತ್ರಿ ನಾರಾಯಣಗೌಡ, ಲಕ್ಷ್ಮಮ್ಮ, ಯಶೋದಮ್ಮ, ಲೀಲಾ ಪಂಪಾಪತಿ, ಮಂಜುನಾಥ್ ಇದ್ದರು.